ವಿಜಯಪುರ: ಇತ್ತೀಚೆಗೆ ಭೀಮಾ ತೀರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇಂದು ಸಾವಿಗೀಡಾಗಿದೆ. ಸಿಂದಗಿ ತಾಲೂಕಿನ ದೇವರನಾವದಗಿ ಬಳಿಯ ಕಬ್ಬಿನ ಗದ್ದೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಸಾವನ್ನಪ್ಪಿದೆ ಎನ್ನಲಾಗ್ತಿದೆ.
ವಿಜಯಪುರ: ಕಬ್ಬಿನ ಗದ್ದೆಯ ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಸಾವು - ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು
ಭೀಮಾ ತೀರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇಂದು ಸಾವಿಗೀಡಾಗಿದೆ.
ಚಿರತೆಯ ಕಳೇಬರ
ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಜಾನುವಾರುಗಳನ್ನು ತಿಂದು ಹಾಕಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಅರಣ್ಯ ಇಲಾಖೆ ವಿವಿಧ ಕಡೆ ಸಿಸಿ ಕ್ಯಾಮರಾ ಅಳವಡಿಸಿದ ಮೇಲೆ ಕ್ಯಾಮರಾದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಂತರ ಇಲಾಖೆ ಮೂರು ಬೋನ್ ಇಟ್ಟಿದ್ದರೂ ಸಹ ಚಿರತೆ ಸೆರೆಯಾಗಿರಲಿಲ್ಲ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.