ವಿಜಯಪುರ :ವಿಜಯಪುರ ಜಿಲ್ಲೆ ನಿಂಬೆ ಹಣ್ಣಿನ ಕಣಜ ಎಂದೇ ಖ್ಯಾತಿ. ಇಲ್ಲಿನ ನಿಂಬೆ ಹಣ್ಣಿನಿಂದ ತಯಾರಿಸಿದ ಉಪ್ಪಿನಕಾಯಿಯನ್ನು ನ್ಯಾಯಬೆಲೆ ಅಂಗಡಿ ಮೂಲಕ ಮಾರಾಟ ಮಾಡಲು ಸರ್ಕಾರದ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ರಾಜ್ಯ ನಿಂಬೆ ಹಣ್ಣಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ನಿಂಬೆಗೆ ದೇಶ-ವಿದೇಶದಲ್ಲಿ ಬೇಡಿಕೆ ಇದೆ. ಇದರ ರಸದಲ್ಲಿ ದೇಹದ ಇಮ್ಯುನಿಟಿ ಹಾಗೂ ಶ್ವಾಸಕೋಶ ಶುದ್ಧೀಕರಣ ಮಾಡುವ ಅಂಶವಿದೆ.
ಉಪ್ಪಿನಕಾಯಿಯನ್ನು ಅರ್ಧ ಕೆಜಿ ಪ್ಯಾಕೇಟ್ನಂತೆ ನ್ಯಾಯಬೆಲೆ ಅಂಗಡಿಗಳ ಮೂಲಕ, ವಿದ್ಯಾರ್ಥಿಗಳ ವಸತಿ ನಿಲಯ, ಅಂಗನವಾಡಿ ಕೇಂದ್ರ, ಶಾಲೆ-ಕಾಲೇಜುಗಳ ವಸತಿ ನಿಲಯಗಳಿಗೆ ಸರಬರಾಜು ಮಾಡಿದರೆ ನಿಂಬೆ ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯುತ್ತದೆ. ಈ ಕಾರಣಕ್ಕಾಗಿ ಆಹಾರ ಇಲಾಖೆಯ ಸಚಿವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಿಂಬೆ ಹಣ್ಣನ್ನು ಬ್ರ್ಯಾಂಡ್ ಮೂಲಕ ಅಮೆಜಾನ್, ಇ-ಮಾರ್ಕೆಟಿಂಗ್ ಮೂಲಕ ಸಹ ಗ್ರಾಹಕರಿಗೆ ತಲುಪಿಸುವ ಕೆಲಸ ಮಂಡಳಿ ಮಾಡುತ್ತಿದೆ. ಇದರ ಜತೆ ಬೆಳೆದ ನಿಂಬೆ ಬೆಳೆ ಕೆಡದಂತೆ ನೋಡಿಕೊಳ್ಳಲು ಡ್ರಾಯರ್ ಎನ್ನುವ ಯಂತ್ರ ಖರೀದಿಸುವ ಯೋಚನೆ ಇದೆ. ಈ ಡ್ರಾಯರ್ ಮೂಲಕ ನಿಂಬೆ ಸಂಸ್ಕರಣೆ ಮಾಡಿ, ಅದನ್ಮು ಅರಬ್ ದೇಶಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದರು.
ಒಂದು ಜಿಲ್ಲೆ ಒಂದು ಉತ್ಪನ್ನ:ಪ್ರತಿ ಜಿಲ್ಲೆಯಲ್ಲಿ ಯಾವುದಾದರೂ ಒಂದು ಬೆಳೆ ಪ್ರಸಿದ್ಧಿ ಪಡೆದಂತೆ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಹಣ್ಣು ತನ್ನದೇ ಛಾಪು ಮೂಡಿಸಿದೆ. ರಾಜ್ಯದಲ್ಲಿ 21,660 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದೆ. ಅದರಲ್ಲಿ 12,220 ಹೆಕ್ಟೇರ್ ಅಂದರೆ ಶೇ.58ರಷ್ಟು ಕೇವಲ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಾರೆ ಎಂದು ಮಾಹಿತಿ ನೀಡಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ನಿಂಬೆ ಬೆಳೆಗಾರರಿಗೆ 30 ಲಕ್ಷದವರೆಗೆ ನೇರ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈಗಾಗಲೇ 57 ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬ್ಯಾಂಕ್ನವರ ಅಸಹಕಾರದಿಂದ ಸಾಲ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಂಘಟನೆಯ ಹಿತದೃಷ್ಟಿಯಿಂದ ಸಚಿವ ಸ್ಥಾನ ನೀಡಿ : ಶಾಸಕ ಎಂ ಪಿ ರೇಣುಕಾಚಾರ್ಯ