ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ವೀರೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಡಾ.ರಾಘವೇಂದ್ರ ಸಿ.ಗೂಳಿ ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ತಾಲೂಕಿನ ಆಲೂರ ಗ್ರಾಮದ ನಿವಾಸಿಯಾಗಿರುವ ಡಾ.ಗೂಳಿ ಅವರು, ಉತ್ತಮ ವಾಗ್ಮಿ, ನಿರೂಪಕರೂ ಆಗಿದ್ದರು. ಬಿಎಡ್ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಕರ್ನಾಟಕ ವಿವಿ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶಿಷ್ಯ ವರ್ಗವನ್ನು ಇವರು ಅಗಲಿದ್ದಾರೆ.