ವಿಜಯಪುರದಲ್ಲಿ ಕೊಂಚ ಸಡಿಲಿಕೆಯಾದ ಲಾಕ್ಡೌನ್...ಎಲ್‌ಬಿಎಸ್ ಮಾರುಕಟ್ಟೆ ಆರಂಭಕ್ಕೆ ಅಸ್ತು...
ಪ್ರತಿದಿನ ಸಾವಿರಾರು ಜನರು ಮಾರುಕಟ್ಟೆ ಆಗಮಿಸುವ ಹಿನ್ನೆಲೆ ಪಾಲಿಕೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿ ಅನ್ವಯವಾಗಿ ಮಾರುಕಟ್ಟೆ ಆರಂಭಿಸಿಲು ಅನುಮತಿ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ವಿಜಯಪುರದಲ್ಲಿ ಕೊಂಚ ಸಡಿಲಿಕೆಯಾದ ಲಾಕ್ಡೌನ್
ವಿಜಯಪುರ: ಕಳೆದ 52 ದಿನಗಳಿಂದ ಕೊರೊನಾ ಭೀತಿಯಿಂದ ಬಂದ್ ಮಾಡಲಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣ ಆರಂಭಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡಿದೆ.
400 ಅಧಿಕ ಮಳಿಗೆಗಳು ಇರುವ ಸಂಕೀರ್ಣದಲ್ಲಿ ಸಮ ಬೆಸ ಆಧಾರಿತವಾಗಿ ಮಾರುಕಟ್ಟೆ ಇಂದಿನಿಂದ ಆರಂಭವಾಗುತ್ತಿದೆ. ಗ್ರಾಹಕರಿಗೆ ಅಂತರ ಕಾಯುವಂತೆ ಹೇಳಲು ಮಹಾನಗರ ಪಾಲಿಕೆ ಮಳಿಗೆ ಮಾಲೀಕರಿಗೆ ಸೂಚನೆ ನೀಡಿದ್ದು, ಮಾರುಕಟ್ಟೆಗೆ ಮಹಾನಗರ ಪಾಲಿಕೆ ಹರ್ಷಾ ಶೆಟ್ಟಿ ಭೇಟಿ ನೀಡಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾರ್ಕಿಂಗ್ ಮಾಡುವ ವ್ಯವಸ್ಥೆ ಮಾಡಿದ್ದಾರೆ.