ವಿಜಯಪುರ: ಸೂಕ್ತ ಬಸ್ ಸೌಲಭ್ಯವಿಲ್ಲದೇ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ನಡೆದಿದೆ. ಕಾಲೇಜಿಗೆ ಹೋಗುವ ಅವಸರದಲ್ಲಿ ವಿದ್ಯಾರ್ಥಿಗಳು ಏಣಿಯ ಸಹಾಯದಿಂದ ಬಸ್‌ನ ಟಾಪ್ ಏರಿ ಪ್ರಯಾಣಿಸಿದ್ದಾರೆ.
ಹೆಚ್ಚಿನ ಬಸ್ಸುಗಳನ್ನು ಬಿಡುವಂತೆ ವಿದ್ಯಾರ್ಥಿಗಳು ಮಾಡಿರುವ ಮನವಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಪಂದಿಸದ ಕಾರಣ ಈ ರೀತಿ ಏಣಿ ಏರಿ ಪ್ರಯಾಣ ಮಾಡಿದ್ದಾರೆ.