ವಿಜಯಪುರ: ಕರ್ನಾಟಕದಿಂದ ಶ್ರೀಶೈಲ ಯಾತ್ರೆಗೆ ತೆರಳುವ ಭಕ್ತರಿಗೆ ಅಲ್ಲಿನ ಸರ್ಕಾರ ಸರಿಯಾಗಿ ಸೌಲಭ್ಯ ಒದಗಿಸುತ್ತಿಲ್ಲ. ಕರ್ನಾಟಕದ ಭಕ್ತರಿಗೆ ಅನ್ಯಾಯ ಮಾಡುತ್ತಿದೆ ಎಂದು ಭ್ರಮರಾಂಭ ಮಲ್ಲಿಕಾರ್ಜುನ ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ ವಿರೇಂದ್ರಗೌಡ ಆರೋಪಿಸಿದ್ದಾರೆ.
ರಾಜ್ಯದಿಂದ ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಮೂಲಸೌಕರ್ಯ ಕೊರತೆ: ವಿರೇಂದ್ರಗೌಡ ಆರೋಪ - ಭ್ರಮರಾಂಭ ಮಲ್ಲಿಕಾರ್ಜುನ ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ ವಿರೇಂದ್ರಗೌಡ
ಕರ್ನಾಟಕದಿಂದ ಶ್ರೀಶೈಲ ಯಾತ್ರೆಗೆ ತೆರಳುವ ಭಕ್ತರಿಗೆ ಅಲ್ಲಿನ ಸರ್ಕಾರ ಸರಿಯಾಗಿ ಸೌಲಭ್ಯ ಒದಗಿಸುತ್ತಿಲ್ಲ. ಕರ್ನಾಟಕದ ಭಕ್ತರಿಗೆ ಅನ್ಯಾಯ ಮಾಡುತ್ತಿದೆ ಎಂದು ಭ್ರಮರಾಂಭ ಮಲ್ಲಿಕಾರ್ಜುನ ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ ವಿರೇಂದ್ರಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಿಂದ ಹೋದ ಲಕ್ಷಾಂತರ ಭಕ್ತರಿಗೆ ಅಲ್ಲಿನ ಸರ್ಕಾರ ಮೋಸ ಮಾಡುತ್ತಿದೆ. ಸರಿಯಾದ ಸೌಕರ್ಯಗಳನ್ನು ನೀಡುತ್ತಿಲ್ಲ. ನಾವು ಅನೇಕ ಬಾರಿ ಹೋರಾಟ ಮಾಡಿದ್ರು ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಂಧ್ರ ಸರ್ಕಾರ 4 ಎಕರೆ13 ಗುಂಟೆ ಜಾಗವನ್ನು ಕರ್ನಾಟಕ ಸರ್ಕಾರಕ್ಕೆ ನೀಡಿತ್ತು. ಆದರೆ 1992ರಲ್ಲಿ ಲೀಸ್ ಅಲ್ಲಿ ಇದನ್ನು ಸರ್ಕಾರ ರದ್ದು ಪಡಿಸಿದೆ. ಸಮಸ್ಯೆ ಪರಿಹರಿಸುವಂತೆ ಕರ್ನಾಟಕ ಸರ್ಕಾರದ ಗಮನಕ್ಕೆ ಅನೇಕ ಬಾರಿ ನಾವು ಮನವಿ ಮಾಡಿದ್ದೇವೆ. ಅಲ್ಲಿನ ಯಾತ್ರಾಭವನ ಅಧಿಕಾರಿಗಳು ಕೂಡ ಸ್ವಚ್ಛತೆಗೆ ಗಮನ ಹರಿಸಿಲ್ಲ ಎಂದು ವೀರೇಂದ್ರಗೌಡ ಆರೋಪಿದರು.
ಯಾತ್ರೆಗೆ ತೆರಳುವ ಭಕ್ತರ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ 4 ಕೋಟಿ ಅನುದಾನ ನೀಡಿ, ಯಾತ್ರಿಕರ ಭದ್ರತೆಗೆ ಮುಂದಾಗಬೇಕು ಎಂದು ಭ್ರಮರಾಂಭ ಮಲ್ಲಿಕಾರ್ಜುನ ಕುಂದು ಕೊರತೆ ಹೋರಾಟ ಸಮಿತಿ ಅಧ್ಯಕ್ಷ, ವಿರೇಂದ್ರಗೌಡ ಆಗ್ರಹಿಸಿದರು.