ವಿಜಯಪುರ: ಜಿಲ್ಲೆಯಿಂದ ದುಡಿಮೆಗಾಗಿ ಮಹಾರಾಷ್ಟ್ರದ ಚಿಕನೂರಿಗೆ ಗುಳೆ ಹೋಗಿದ್ದ ಸಾವಿರಾರು ಕಾರ್ಮಿಕರು ರೈಲಿನ ಮೂಲಕ ತವರಿಗೆ ವಾಪಸಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸಿಲುಕಿದ್ದ 1200 ಕಾರ್ಮಿಕರು ರಾಜ್ಯಕ್ಕೆ ವಾಪಸ್ - ವಿಜಯಪುರ ಕಾರ್ಮಿಕರು
ಲಾಕ್‌ಡೌನ್ ಹಿನ್ನೆಲೆ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕಾರ್ಮಿಕರು ಕೆಲಸವೂ ಇಲ್ಲದೆ ತುತ್ತು ಅನ್ನಕ್ಕಾಗಿ ಸಂಕಷ್ಟ ಎದುರಿಸುವಂತಾಗಿತ್ತು. ತಮ್ಮ ಊರುಗಳಿಗೆ ವಾಪಸಾಗಲು ಹವಣಿಸುತ್ತಿದ್ದ ಕಾರ್ಮಿಕರು ಇಂದು ಶ್ರಮಿಕ್ ರೈಲು ಹತ್ತಿ ತವರು ಜಿಲ್ಲೆಗೆ ವಾಪಸಾಗಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕಾರ್ಮಿಕರು ಕೆಲಸವೂ ಇಲ್ಲದೆ ತುತ್ತು ಅನ್ನಕ್ಕಾಗಿ ಸಂಕಷ್ಟ ಎದುರಿಸುವಂತಾಗಿತ್ತು. ತಮ್ಮ ಊರುಗಳಿಗೆ ವಾಪಸಾಗಲು ಹವಣಿಸುತ್ತಿದ್ದ ಕಾರ್ಮಿಕರು ಇಂದು ಶ್ರಮಿಕ್ ರೈಲು ಹತ್ತಿ ತವರು ಜಿಲ್ಲೆಗೆ ವಾಪಸಾಗಿದ್ದಾರೆ. ಒಟ್ಟು 1200 ಕಾರ್ಮಿಕರು ವಿಜಯಪುರ ನಗರಕ್ಕೆ ಬಂದಿದ್ದು, ವಾಪಸಾದವರ ಪೈಕಿ 200 ಜನ ಬೇರೆ ಜಿಲ್ಲೆಯ ಕಾರ್ಮಿಕರಾಗಿದ್ದಾರೆ.
ರೈಲು ನಿಲ್ದಾಣಕ್ಕೆ ಆಗಮಿಸಿದ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಉಪಹಾರ ವ್ಯವಸ್ಥೆ ಮಾಡಿ 40 ಬಸ್ಗಳ ಮೂಲಕ ಆಯಾ ತಾಲೂಕಿನ ಕೇಂದ್ರಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಲ್ಲಾಡಳಿತ ನಿಗದಿಪಡಿಸಿರುವ ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.