ವಿಜಯಪುರ:ಮೊಬೈಲ್‌ನಿಂದ ಮಿಸ್ಡ್ ಕಾಲ್ ಹೋಗಿದ್ದಕ್ಕೆ ಒಬ್ಬ ವ್ಯಕ್ತಿಯ ಕೊಲೆ ನಡೆದ ಘಟನೆ ತಾಳಿಕೋಟೆಯ ಮೂಕಿಹಾಳ ಗ್ರಾಮದಲ್ಲಿ ಸಂಭವಿಸಿದೆ.
ಮಹಾರಾಷ್ಟ್ರದ ರಾಯಘಡ ಜಿಲ್ಲೆ ಮಾನಗಾಂವ ತಾಲೂಕಿನ ಪಾವಸುಳವಾಡಿ ಗ್ರಾಮದ ಸೋನು ಲಕ್ಷ್ಮಣ ಹೀಲಮ (35) ಎಂಬಾತ ಕೊಲೆಯಾಗಿದ್ದಾನೆ. ಗೋಪಾಲ ಮಾಧು ಜಾಧವ ಆರೋಪಿಯಾಗಿದ್ದು, ಈ ಬಗ್ಗೆ ಸೋನು ಪತ್ನಿ ಮೀನಾ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದ್ದಿಲು ತಯಾರಿಸಲೆಂದು ಮಹಾರಾಷ್ಟ್ರದಿಂದ ಸೋನು ಕುಟುಂಬ ತಾಳಿಕೋಟೆಯ ಮೂಕಿಹಾಳ ಗ್ರಾಮಕ್ಕೆ ವಲಸೆ ಬಂದಿತ್ತು. ಇವರ ಜೊತೆಗೆ ಮಹಾರಾಷ್ಟ್ರದಿಂದ ಕೆಲಸಕ್ಕೆ ಬಂದ ಗೋಪಾಲ ಮಾಧು ಜಾಧವ ಕುಟುಂಬವು ವಲಸೆ ಬಂದಿದೆ.