ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಕೊರೊನಾಗೆ ಲ್ಯಾಬ್ ಟೆಕ್ನಿಶಿಯನ್ ಬಲಿ - ವಿಜಯಪುರದಲ್ಲಿ ಲ್ಯಾಬ್ ಟೆಕ್ನಿಶಿಯನ್ ಸಾವು

ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್​​ ಆಗಿ ಸೇವೆ ಸಲ್ಲಿಸುತ್ತಿದ್ದ ಲ್ಯಾಬ್​ ಟೆಕ್ನಿಶಿಯನ್​ ಇಂದು ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ.

lab technician died due to corona in vijaypur
ಕೊರೊನಾಗೆ ಬಲಿ

By

Published : Sep 8, 2020, 10:10 PM IST

ವಿಜಯಪುರ:ಕೋವಿಡ್​ 19 ವೈರಸ್​ಗೆ ಕೊರೊನಾ ವಾರಿಯರ್ ಬಲಿಯಾಗಿದ್ದಾರೆ. ಹೋಂ ಐಸೋಲೇಶನ್ ನಲ್ಲಿದ್ದ ಸರಕಾರಿ ಲ್ಯಾಬ್ ಟೆಕ್ನಿಶಿಯನ್ ನಿನ್ನೆ ರಾತ್ರಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದು, ಇಂದು ಸಾವನ್ನಪ್ಪಿದ್ದಾರೆ.

ಕೊರೊನಾಗೆ ಬಲಿ
ಅವರನ್ನು ವಿಜಯಪುರದ ಅಲ್-ಅಮೀನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸೇರಿದೆ ಲ್ಯಾಬ್ ಸಿಬ್ಬಂದಿ ಸಂತಾಪ ಸೂಚಿಸಿದರು. ಸ್ಥಳಕ್ಕೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಭೇಟಿ ನೀಡಿದರು.ಈ ವೇಳೆ ಲ್ಯಾಬ್ ಟೆಕ್ನಿಶಿಯನ್ ಗಳು ತಮ್ಮ ಸಮಸ್ಯೆಗಳನ್ನು ಡಿಸಿ ಎದುರು ಹೇಳಿಕೊಂಡರು. ದಯವಿಟ್ಟು ಸ್ವ್ಯಾಬ್ ಟೆಸ್ಟ್ ಟಾರ್ಗೆಟ್ ನೀಡಬೇಡಿ ಎಂದು ಮನವಿ ಸಲ್ಲಿಸಿದರು.

ಜನರನ್ನು ಪರೀಕ್ಷೆಗೆ ಒಪ್ಪಿಸುವುದು ಕಷ್ಟದ ಕೆಲಸವಾಗಿದೆ. ಮನವಿ ಮಾಡಿದರೂ ಜನ ಗಂಟಲು ದ್ರವದ ಮಾದರಿ ನೀಡಲು ಹಿಂಜರಿಯುತ್ತಾರೆ.
ಈ ಹಿನ್ನೆಲೆ ಟಾರ್ಗೆಟ್ ಹೆಚ್ಚಿಸದಂತೆ ಮನವಿ ಮಾಡಿದರು. ಸಮರ್ಪಕವಾಗಿ ಮಾಸ್ಕ್ ಪೂರೈಸುವಂತೆ ಲ್ಯಾಬ್ ಟೆಕ್ನಿಶಿಯನ್​ಗಳು ಮನವಿ ಮಾಡಿದರು.
ಲ್ಯಾಬ್ ಟೆಕ್ನಿಶಿಯನ್ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಭರವಸೆ ನೀಡಿದರು.

ABOUT THE AUTHOR

...view details