ಕರ್ನಾಟಕ

karnataka

ETV Bharat / state

ಖಬರಸ್ತಾನ್‌ದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಭಾವೈಕ್ಯತೆ ಮೆರೆದ ಸ್ವಾಮೀಜಿ - ಖಬರಸ್ತಾನ್‌ದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಚನ್ನವೀರ ದೇವರು

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಹಿರೇಮಠದ ಚನ್ನವೀರ ದೇವರು ತಾಳಿಕೋಟೆ ರಸ್ತೆಯಲ್ಲಿರುವ ಖಬರಸ್ತಾನಕ್ಕೆ ಭೇಟಿ ನೀಡಿ ಸಾಂಕೇತಿಕವಾಗಿ ಮುಸ್ಲಿಂ ಸಮಾಜದ ಗೋರಿಯೊಂದನ್ನು ಸ್ವಚ್ಛಗೊಳಿಸುವ ಮೂಲಕ ಭಾವೈಕ್ಯತೆ ಮೆರೆದರು.

ಕುಂಟೋಜಿ ಹಿರೇಮಠದ ಚನ್ನವೀರ ದೇವರು
ಕುಂಟೋಜಿ ಹಿರೇಮಠದ ಚನ್ನವೀರ ದೇವರು

By

Published : Jan 10, 2022, 10:19 AM IST

ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಂ ಸಮಾಜದ ಖಬರಸ್ತಾನಕ್ಕೆ ಸ್ವಾಮೀಜಿಯೊಬ್ಬರು ಭೇಟಿ ನೀಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಹಿರೇಮಠದ ಚನ್ನವೀರ ದೇವರು ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಂ ಸಮಾಜದ ಖಬರಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮುಸ್ಲಿಂ ಸಮಾಜದ ಗೋರಿಯೊಂದನ್ನು ಸ್ವಚ್ಛಗೊಳಿಸಿದರು.

ಖಬರಸ್ತಾನಕ್ಕೆ ಭೇಟಿ ನೀಡಿದ ಕುಂಟೋಜಿ ಹಿರೇಮಠದ ಚನ್ನವೀರ ದೇವರು ಸ್ವಾಮೀಜಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಯುವಕರು ಕೈಗೊಂಡಿರುವ ಈ ಸ್ವಚ್ಛತಾ ಕಾರ್ಯ ಇತರರಿಗೂ ಮಾದರಿ. ವೀರಶೈವ ಲಿಂಗಾಯತ ಮಠಾಧಿಪತಿಗಳು ಕೇವಲ ಒಂದೇ ಧರ್ಮಕ್ಕೆ ಸೀಮಿತವಾಗಬಾರದು. ಎಲ್ಲ ಧರ್ಮವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಓದಿ:1.80 ಲಕ್ಷ ಸನಿಹಕ್ಕೆ ಬಂದ ಕೊರೊನಾ ಪ್ರಕರಣಗಳು... ದೇಶದಲ್ಲಿ ಕೋವಿಡ್​ ಆತಂಕ!

ABOUT THE AUTHOR

...view details