ಮುದ್ದೇಬಿಹಾಳ :ತಾಳಿಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ಮಹಾದೇವಪ್ಪ ಕುಂಬಾರ ಅವಿರೋಧವಾಗಿ ಆಯ್ಕೆಯಾದರು.
ಸುಮಾರು 13 ಜನ ಆಡಳಿತ ಮಂಡಳಿಯ ಸದಸ್ಯರ ಬಲ ಹೊಂದಿದ್ದ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿದ್ದ ಶರಣಪ್ಪ ಇಲಕಲ್ಲ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸಹಕಾರಿ ಸಂಘಗಳ ಉಪನಿಬಂಧಕರ ಆದೇಶದನ್ವಯ ನೂತನ ಅಧ್ಯಕ್ಷರ ಆಯ್ಕೆಗಾಗಿ ಸಂಘದ ಕಾರ್ಯಾಲಯದಲ್ಲಿ ಚುನಾವಣೆ ನಡೆಯಿತು.