ವಿಜಯಪುರ:ಹದಗೆಟ್ಟ ರಸ್ತೆಯಲ್ಲಿ ಬಸ್ ಸಿಲುಕಿ ಪ್ರಯಾಣಿಕರು ಕೆಲಕಾಲ ಪರದಾಟ ನಡೆಸಿದ ಘಟನೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಹದಗೆಟ್ಟ ರಸ್ತೆಯಲ್ಲಿ ಸಿಲುಕಿದ ಕೆಎಸ್‌ಆರ್‌ಟಿಸಿ ಬಸ್: ಪ್ರಯಾಣಿಕರ ಪರದಾಟ - ವಿಜಯಪುರ ರಸ್ತೆಯಲ್ಲಿ ಸಿಲುಕಿದ ಬಸ್
ಹದಗೆಟ್ಟ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಿಲುಕಿ ಪ್ರಯಾಣಿಕರು ಕೆಲಕಾಲ ಪರದಾಟ ನಡೆಸಿದ ಘಟನೆ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗುಂಡಿಗಳು ತುಂಬಿದ ರಸ್ತೆಯಲ್ಲಿ ಕೆಸರು ಗದ್ದೆಯಂತಾದ ಪರಿಣಾಮ ಕಲಬುರಗಿಯಿಂದ ಸಿಂದಗಿ ಪಟ್ಟಣಕ್ಕೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡು ರಸ್ತೆಯಲ್ಲಿ ಸಿಲುಕಿಕೊಂಡಿದ್ದು, ಬಳಿಕ ಬಸ್ ಚಾಲಕ ಸಿಬ್ಬಂದಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಇನ್ನು ದುರಸ್ತಿಯಾದ ರಸ್ತೆಯಲ್ಲಿ ಒಂದಲ್ಲಾ ಒಂದು ಅವಾಂತರ ಸಂಭವಿಸುತ್ತಿದ್ದು, ರಸ್ತೆಗೆ ವಾಹನ ಸವಾರರು ಬರಲು ಹಿಂದೇಟು ಹಾಕುವಂತಾಗಿದ್ದು ರಸ್ತೆಯಲ್ಲಿ ಬಸ್ ಸಿಲುಕಿಕೊಂಡ ಪರಿಣಾಮ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರಾಣಾಪಾಯ ಸಂಭವಿಸುವ ಮುಂಚೆ ಅಧಿಕಾರಿಗಳು ಎಚ್ಚೆತ್ತು ರಸ್ತೆ ಸರಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.