ಕರ್ನಾಟಕ

karnataka

ETV Bharat / state

ಕೃಷ್ಣಾ ನೀರಿನ ಹಂಚಿಕೆ ವ್ಯಾಜ್ಯ ಶೀಘ್ರ ಇತ್ಯರ್ಥವಾಗಬೇಕು.. ಮಾಜಿ ಸಚಿವ ಎಂ ಬಿ ಪಾಟೀಲ್​ ಒತ್ತಾಯ - Krishna water case clear soon

ಕೃಷ್ಣಾ ನೀರಿನ ಹಂಚಿಕೆ ಕುರಿತ ವ್ಯಾಜ್ಯವನ್ನು ಬೇಗ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್​ ವಿಜಯಪುರದಲ್ಲಿ ತಿಳಿಸಿದ್ದಾರೆ.

ಕೃಷ್ಣಾ ನೀರಿನ ಹಂಚಿಕೆ ವ್ಯಾಜ್ಯ ಶೀಘ್ರ ಇತ್ಯರ್ಥವಾಗಬೇಕು

By

Published : Sep 30, 2019, 8:26 PM IST

ವಿಜಯಪುರ:ಕೃಷ್ಣಾ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೃಷ್ಣಾ ನದಿ ನೀರು ವ್ಯಾಜ್ಯ ಉತ್ತರ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದೆ. ರಾಜ್ಯ ಸರ್ಕಾರ ಈ ವ್ಯಾಜ್ಯವನ್ನು ಬೇಗ ಇತ್ಯರ್ಥ ಮಾಡಬೇಕು.ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಸಾಧ್ಯವಾದ್ರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ ಹೇಳಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಕೃಷ್ಣ ನ್ಯಾಯಾಧಿಕರಣದ ತೀರ್ಪು ಬಂದಿದೆ. 2013ರಲ್ಲಿ ಆಂಧ್ರಪ್ರದೇಶದಿಂದಾಗಿ ಆಲಮಟ್ಟಿ ಎತ್ತರಕ್ಕೆ ತಡೆಯೊಡ್ಡಿತ್ತು. ಸುಪ್ರೀಂಕೋರ್ಟ್‌ನಲ್ಲಿ ನೀರು ಹಂಚಿಕೆ ವಿಚಾರವಾಗಿ ಆಂಧ್ರ ಪಿಟಿಷನ್ ಹಾಕಿದೆ ಎಂದು ಪಾಟೀಲ್​ ತಿಳಿಸಿದ್ರು. ಕೃಷ್ಣಾ ನದಿ ನೀರು ವ್ಯಾಜ್ಯ ಉತ್ತರ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದೆ. ಶೇ.60%ರಷ್ಟು ನೀರಾವರಿ ಕಾಮಗಾರಿಗಳು ಕೃಷ್ಣಾ ನದಿ ವ್ಯಾಪ್ತಿಯಲ್ಲಿವೆ. ರಾಜ್ಯ ಸರ್ಕಾರ ಈ ವ್ಯಾಜ್ಯವನ್ನು ಬೇಗ ಇತ್ಯರ್ಥ ಮಾಡಬೇಕು. ಇನ್ನೂ ಅಕ್ಟೋಬರ್ 18ರ ನಂತರ ಸುಪ್ರೀಂಕೋರ್ಟ್ ತೀರ್ಪು ಬರಲಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಾಡಿದಂತೆ ಇಲ್ಲಿಯೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ನೋಟಿಫಿಕೇಷನ್ ಮೂಲಕ ಸುಪ್ರೀಂಕೋರ್ಟ್ ಆದೇಶ ಪಾಲನೆ ಜೊತೆಗೆ ನೀರು ಹಂಚಿಕೆ ಮಾಡಬೇಕು ಎಂದರು.

ಕೃಷ್ಣಾ ನೀರಿನ ಹಂಚಿಕೆ ವ್ಯಾಜ್ಯ ಶೀಘ್ರ ಇತ್ಯರ್ಥವಾಗಬೇಕು.. ಎಂ ಬಿ ಪಾಟೀಲ್ ಒತ್ತಾಯ

ಇನ್ನು,ಆಲಮಟ್ಟಿ ಅಣೆಕಟ್ಟು 524 ಮೀಟರ್‌ಗೆ ಹೆಚ್ಚಳ ವಿಚಾರವಾಗಿ ಮಾತನಾಡಿ, 75.533 ಎಕರೆ ಪ್ರದೇಶ ಮುಳುಗಡೆಯಾಗುತ್ತೆ. ಕೆನಾಲ್ ನೆಟವರ್ಕ್​ಗೆ ಹಣ ಬಿಡುಗಡೆಯಾಗಿದೆ. 50 ಸಾವಿರ ಕೋಟಿ ವೆಚ್ಚದಲ್ಲಿ ಇದೆಲ್ಲ ಮುಕ್ತಾಯವಾಗಲಿದೆ. 25 ಸಾವಿರ ಕೋಟಿ ಲ್ಯಾಂಡ್‌ಗೆ, ಆರ್‌ ಎಂಡ್ ಆರ್‌ಗೆ 5 ಕೋಟಿ ಸೇರಿದಂತೆ ಸುಮಾರು 50 ಕೋಟಿಯಲ್ಲಿ ಎಲ್ಲವೂ ಮುಕ್ತಾಯವಾಗಲಿದೆ. ಐದು ವರ್ಷಗಳ ಅವಧಿಯಲ್ಲಿ ನೀರು ಸಂಗ್ರಹ ಮಾಡಬಹುದು. ಮೊದಲ ಎರಡು ವರ್ಷ ಪುರ್ನವಸತಿ ಕೆಲಸ ಆಗಬೇಕು. ಆಮೇಲೆ ನೀರು ಸಂಗ್ರಹಣೆ ಮಾಡಬೇಕು ಎಂದು ಮಾಹಿತಿ ನೀಡಿದ್ರು. ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಂಕಿ ಅಂಶಗಳನ್ನು ವಿವರಿಸುತ್ತೇನೆ. ನೀರಾವರಿ ಯೋಜನೆ ವಿಚಾರದಲ್ಲಿ ಪ್ರತಿಷ್ಠೆ ಇರಬಾರದು. ನಾನು ಯಾವುದೇ ಪ್ರತಿಷ್ಠೆ ಇಲ್ಲದೆ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಹಿತಿ ನೀಡುತ್ತೇನೆ ಎಂದರು.

ABOUT THE AUTHOR

...view details