ಕರ್ನಾಟಕ

karnataka

ETV Bharat / state

ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ: ನದಿಪಾತ್ರದ ಜನರಿಗೆ ಡಂಗೂರ ಸಾರಿ ಎಚ್ಚರಿಕೆ - ಕೃಷ್ಣಾ ನದಿ

ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಆಲಮಟ್ಟಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, 3 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

krishna-river-overflowing-from-heavy-rain-causing-floods-fear-for-villagers
ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

By

Published : Jul 24, 2021, 9:30 AM IST

ಮುದ್ದೇಬಿಹಾಳ (ವಿಜಯಪುರ): ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆಗಳಿರುವ ಹಿನ್ನೆಲೆ ನದಿಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ತಾಲೂಕಾಡಳಿತ ಎಚ್ಚರಿಕೆ ನೀಡಿದೆ. ನದಿ ಪಾತ್ರದ ಸಮೀಪದ 7 ಗ್ರಾಮ ಪಂಚಾಯತ್​ಗಳ​ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರವಾಹದ ಪರಿಸ್ಥಿತಿ ಅವಲೋಕಿಸಲು 8 ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಆದೇಶ ಹೊರಡಿಸಿದ್ದಾರೆ. ಈ ನಡುವೆ ಪ್ರವಾಹದ ಆತಂಕದ ಹಿನ್ನೆಲೆ ಜನ, ಜಾನುವಾರುಗಳನ್ನು ಬಿಡದಂತೆ ಎಚ್ಚರಿಸಿದ್ದು, ಪಂಪ್​ಸೆಟ್​​ಗಳನ್ನು ಸ್ಥಳಾಂತರಿಸುವಂತೆ ಡಂಗೂರ ಸಾರಲಾಗಿದೆ.

ನೋಡಲ್ ಅಧಿಕಾರಿಗಳು

ಕಾಳಗಿ ಗ್ರಾ.ಪಂಗೆ ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಮೊ.9449442890, ಯರಝರಿ ಗ್ರಾಪಂಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ ಮೊ.9480397546, ಕೋಳೂರು ಗ್ರಾಪಂಗೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜು ಬಿರಾದಾರ ಮೊ.8861721762, ತಂಗಡಗಿ ಗ್ರಾಪಂಗೆ ಕೆಬಿಜೆಎನ್‌ಎಲ್ ಎಎಲ್​ಬಿಸಿ ಉಪ ವಿಭಾಗ ನಂ-2ರ ಎಇಇ ಜಿ.ಎಸ್.ಪಾಟೀಲ, ಆಲೂರ ಗ್ರಾಪಂಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷಚಂದ್ರ ಟಾಕಳೆ ಮೊ.9972719844.

ರಕ್ಕಸಗಿ ಗ್ರಾಪಂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಮೊ.7676954284, ಬಿಜ್ಜೂರ ಗ್ರಾಪಂಗೆ ಜಿಪಂ ಉಪ ವಿಭಾಗದ ಎಇಇ ವಿಜಯಕುಮಾರ ನಾಯಕ ಮೊ.9945957538 ಇವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಓದಿ:ನಾರಾಯಣಪುರ ಡ್ಯಾಮ್​ನಿಂದ ಮೂರುವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ : ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

ABOUT THE AUTHOR

...view details