ವಿಜಯಪುರ:ಹೊಲಕ್ಕೆ ತೆರಳಿದ್ದ ವ್ಯಕ್ತಿಯ ಹೊಟ್ಟೆಗೆ ಯಾರೋ ಅಪರಿಚಿತರು ಏಕಾಏಕಿ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಇಂಡಿ ತಾಲೂಕಿನ ಕೊಳುರಗಿ ಗ್ರಾಮದಲ್ಲಿ ನಡೆದಿದೆ.
ಗುನಪ್ಪಾ ಪರಸಪ್ಪ ಹರಿಜನ (48) ಚೂರಿ ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಜಮೀನನ ಕೆಲಸಕ್ಕೆಂದು ಹೋದಾಗ ಅಪರಿಚಿತರು ಏಕಾಏಕಿ ಬಂದು ಗುನಪ್ಪಾನ ಮೆಲೆ ಹಲ್ಲೆ ಮಾಡಿ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದಾರೆ. ಇರಿತದಿಂದ ಗುನಪ್ಪಾನ ಹೊಟ್ಟೆಯಲ್ಲಿನ ಕರಳು ಹೊರಬಿದ್ದಿವೆ.
ಚಾಕು ಇರಿತದಿಂದ ತೀವ್ರ ಗಾಯಗೊಂಡಿರುವುದನ್ನ ಕಂಡ ಸಾರ್ವಜನಿಕರು ನೆರವಿಗೆ ಧಾವಿಸಿದ್ದಾರೆ. ತೀವ್ರ ನೋವಿನಿಂದ ನರಳಾಡುತ್ತಿದ್ದ ಗುನಪ್ಪಾನನ್ನು ಸಾರ್ವಜನಿಕರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಗುನಪ್ಪಾನ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಗುನಪ್ಪಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು ಹೋರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.