ಕರ್ನಾಟಕ

karnataka

ETV Bharat / state

ಕೆಬಿಜೆಎನ್ಎಲ್​​​ ಆಲಮಟ್ಟಿ ಡಿಎಫ್​ಓ ಹೃದಯಾಘಾತದಿಂದ ನಿಧನ - ವಿಜಯಪುರ ಸುದ್ದಿ

ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್​​ನ ಆಲಮಟ್ಟಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ನಾಯಕ(58) ಮಂಗಳವಾರ ತಡರಾತ್ರಿ ಉತ್ತರಾಖಂಡನ್ ಡೆಹರಾಡೂನ್ ಬಳಿ ಟ್ರೆಕ್ಕಿಂಗ್​ನಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

KBJNL's  alamatti  DFO has died of a heart attack
KBJNL's alamatti DFO has died of a heart attack

By

Published : Jan 23, 2020, 7:13 PM IST

ವಿಜಯಪುರ: ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್​​ನ ಆಲಮಟ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜಿಲ್ಲೆಯ ನಿಡಗುಂದಿಯಲ್ಲಿರುವ ಆಲಮಟ್ಟಿಯ ಡಿಎಫ್​ಓ ಪಿ.ಕೆ. ನಾಯಕ(58) ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರಾಖಂಡನ್ ಡೆಹರಾಡೂನ್ ಬಳಿ ಟ್ರೆಕ್ಕಿಂಗ್​ನಲ್ಲಿದ್ದಾಗ ತೀವ್ರ ಹೃದಯಾಘಾತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಪಿ.ಕೆ. ನಾಯಕ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ನಾಯಕ ನಿಧನ

ಡೆಹ್ರಾಡೂನ್ ಬಳಿ ಟ್ರೆಕ್ಕಿಂಗ್ ಜತೆ ಫೋಟೋಗ್ರಾಫಿಗಾಗಿ ತೆರಳಿದಾಗ ತೀವ್ರ ಹಿಮ ಕುಸಿತದ ಕಾರಣ ಹವಾಮಾನ ವೈಪರಿತ್ಯವಾಗಿದೆ. ಈ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರನ್ನು ಅರಣ್ಯಾಧಿಕಾರಿ ನಾಯಕ ಅಗಲಿದ್ದಾರೆ.

ಆಲಮಟ್ಟಿಯಿಂದ ಡೆಹ್ರಾಡೂನ್‌ಗೆ ಮೂರು ಜನ ಅರಣ್ಯಾಧಿಕಾರಿಗಳು ತೆರಳಿದ್ದರು. ವಿಜಯಪುರ ಕೊಳ್ಳೆಯನ್ನು ಹಸರೀಕರಣ ಮಾಡಲು ಶ್ರಮಿಸಿದ್ದರು. ಡಿಎಫ್ಓ ನಾಯಕ ಅವರ ನಿಧನಕ್ಕೆ ಮಾಜಿ ಸಚಿವ ಎಂ. ಬಿ. ಪಾಟೀಲ್​ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details