ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಪಿತಾಮಹ ಪಂಡಿತ ಜವಾಹರ್ ಲಾಲ್ ನೆಹರು: ಸಚಿವ ಸುಧೀರ ಮುನಗಂಟಿವಾರ್

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದ ಇನ್ನೂ ಜೀವಂತವಾಗಿರಲು ಕಾರಣ ಪಂಡಿತ ಜವಾಹರ್​​ ಲಾಲ್​ ನೆಹರು ಎಂದು ಮಹಾರಾಷ್ಟ್ರ ಅರಣ್ಯ ಮತ್ತು ಮೀನುಗಾರಿಕೆ ಸಚಿವ ಸುಧೀರ ಮುನಗಂಟಿವಾರ್ ಆರೋಪಿಸಿದ್ದಾರೆ.

karnataka-maharashtra-border-isuue
ಸಚಿವ ಸುಧೀರ ಮುನಗಂಟಿವಾರ್

By

Published : Apr 27, 2023, 11:10 PM IST

ಸಚಿವ ಸುಧೀರ ಮುನಗಂಟಿವಾರ್

ವಿಜಯಪುರ : ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದ ಸಮಸ್ಯೆಯನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಪಕ್ಷ. ಈ ಸಮಸ್ಯೆಯ ಪಿತಾಮಹ ಪಂಡಿತ ಜವಾಹರ್‌ಲಾಲ್ ನೆಹರು ಎಂದು ಮಹಾರಾಷ್ಟ್ರ ಅರಣ್ಯ ಮತ್ತು ಮೀನುಗಾರಿಕೆ ಸಚಿವ ಸುಧೀರ ಮುನಗಂಟಿವಾರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಸಮಸ್ಯೆ ಬಗೆಹರಿಸಲು ಸಭೆ ಕರೆಯಿರಿ ಎಂದು ಕೇಳಿದ್ದ ಮನವಿಗೆ ನೆಹರು ಅವರು ಇದು ಎರಡು ರಾಜ್ಯದ ಸೆಕ್ರಟರಿಗಳು ಬಗೆಹರಿಸುತ್ತಾರೆ ಎಂದು ಹೇಳಿದ್ದರು. ಗಡಿವಿವಾದವನ್ನು ಸೆಕ್ರೇಟರಿ ಹೇಗೆ ಬಗೆಹರಿಸಲು ಸಾಧ್ಯವಾಗುತ್ತದೆ. ಇದು ಅಧಿಕಾರದಲ್ಲಿ ಇರುವವರು ಮಾಡಬೇಕಾದ ಕೆಲಸವಾಗಿದೆ. ಸದ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿವಾದ ಸುಪ್ರಿಂಕೋರ್ಟ್‌ನಲ್ಲಿದೆ. ಈ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದರು.

ಕರ್ನಾಟಕ ಏಕೀಕರಣವಾದಾಗಿನಿಂದ ಈ ಸಮಸ್ಯೆ ಉದ್ಘವವಾಗಿದೆ. ಮಾತುಕತೆಯಿಂದ ಬಗೆಹರಿಸುವ ಸಮಸ್ಯೆಯನ್ನು ಅಂದು ಜವಾಹರಲಾಲ್ ನೆಹರು ಬಗೆಹರಿಸದೇ ಹಾಗೇ ಬಿಟ್ಟ ಪರಿಣಾಮ ಈ ಸಮಸ್ಯೆ ಇಂದು ದೊಡ್ಡದಾಗಿದೆ. ಇದು ಯಾವುದೇ ರಾಜಕೀಯ ಸಮಸ್ಯೆ ಅಲ್ಲ, ಎರಡು ರಾಜ್ಯಗಳ ನಡುವೆ ಇರುವ ವಿವಾದವನ್ನು ಕಾಂಗ್ರೆಸ್ ಇನ್ನೂ ಜೀವಂತವಾಗಿಟ್ಟಿದೆ ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ಹತಾಶೆ, ಪ್ರಧಾನಿ ಬಾಯಲ್ಲೂ ಕಾಂಗ್ರೆಸ್ ಗ್ಯಾರಂಟಿಯದ್ದೇ ಮಾತು: ಡಿಕೆಶಿ

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಕರ್ನಾಟಕ ಅಥವಾ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಾತನಾಡಬಹುದು. ಆದರೆ ಈ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿರುವುದರಿಂದ ಸುಪ್ರೀಂ ಕೋರ್ಟ್​ನ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಹೇಳಿದರು. ನಾನು ಕರ್ನಾಟಕದ ಪ್ರಗತಿ ಮತ್ತು ಅಭಿವೃಧ್ದಿ ಬಗ್ಗೆ ಮಾತನಾಡಲು ಬಂದಿದ್ದೇನೆ. ಈ ಮೂಲಕ ಜನರಲ್ಲಿ ಮತ ಬಿಜೆಪಿಗೆ ಮತನೀಡುವಂತೆ ಕೋರಲು ಬಂದಿದ್ದೇನೆ.ಜನರು ಅಭಿವೃದ್ಧಿ ಪರ ಮತದಾನ ಮಾಡಬೇಕು. ಮತ್ತು ದೇಶವನ್ನು ಹಾಳು ಮಾಡಿದ ಕಾಂಗ್ರೆಸ್​ನಿಂದ ದೇಶವನ್ನು ರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಮೀಸಲಾತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಬರುವುದಿಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಕುರ್ಚಿ ಆಸೆಗಾಗಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ದೇಶದ ಯಾವುದೇ ಸಮಸ್ಯೆಯನ್ನು ಬಗೆಹರಿಸದೇ ಸುಮ್ಮನಿರಲ್ಲ. ಜಮ್ಮು ಕಾಶ್ಮೀರದಲ್ಲಿನ ಆರ್ಟಿಕಲ್​ 370 ವಿಧಿಯನ್ನು ಹಾಗೂ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿದ್ದ ತ್ರಿವಳಿ ತಲಾಖ್​ ಮುಂತಾದ ವಿಷಯಗಳನ್ನು ಬಗೆಹರಿಸಿದ್ದಾರೆ ಎಂದರು.

ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸಾರ್ವಜನಿಕರಿಗೆ ದೊರೆಯುವ ಮೂಲಭೂತ ಸಮಸ್ಯೆಗಳನ್ನು ನೀಡುತ್ತಲೇ ಬಂದಿದೆ, ಇನ್ನಷ್ಟು ಅಭಿವೃದ್ಧಿ ಕಾರ್ಯವಾಗಲು ಬರುವ ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಯ ಮತದಾನದಲ್ಲಿ ಬಿಜೆಪಿ ಕಮಲದ ಗುರುತಿಗೆ ಮತಹಾಕಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ :2024ಕ್ಕೆ ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣ ಪೂರ್ಣ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ

ABOUT THE AUTHOR

...view details