ಕರ್ನಾಟಕ

karnataka

ETV Bharat / state

ತಾಳಿಕೋಟಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗೆ ಹೈಕೋರ್ಟ್ ತಡೆಯಾಜ್ಞೆ - Kalburgi Highcourt latest news

ಅ.27 ರಂದು ತಾಳಿಕೋಟೆಯ ಪುರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಗೆ ಕಲಬುರಗಿ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

Kalburgi Highcourt
Kalburgi Highcourt

By

Published : Oct 24, 2020, 9:16 PM IST

ಮುದ್ದೇಬಿಹಾಳ (ವಿಜಯಪುರ ):ತಾಳಿಕೋಟೆ ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಕುರಿತು ಇದೇ ಅ.27 ರಂದು ನಿಗದಿಪಡಿಸಲಾಗಿದ್ದ ಚುನಾವಣೆಗೆ ಕಲಬುರಗಿಯ ಉಚ್ಚ ನ್ಯಾಯಾಲಯವ ತಡೆಯಾಜ್ಞೆ ನೀಡಿದೆ.

ಈ ಬಗ್ಗೆ ಆಧಿಕೃತ ಪ್ರಕಟಣೆ ನೀಡಿರುವ ತಹಶೀಲ್ದಾರ್ ಅನಿಲ್ ಕುಮಾರ ಢವಳಗಿ, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಕಲಬುರಗಿ ಹೈಕೋರ್ಟ್ ಪೀಠವು ತಾಳಿಕೋಟೆ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿರುತ್ತದೆ. ಉಚ್ಚ ನ್ಯಾಯಾಲಯದ ಮುಂದಿನ ಆದೇಶದವರೆಗೂ ಸದರಿ ಚುನಾವಣೆ ಮುಂದೂಡಲಾಗಿದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮೀಸಲು ಪ್ರಶ್ನಿಸಿ ಸದಸ್ಯರೊಬ್ಬರು ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಸದ್ಯಕ್ಕೆ ಅಧ್ಯಕ್ಷ ಗಾದಿಗೆ ಏರುವ ಉಮೇದಿನಲ್ಲಿದ್ದ ಸದಸ್ಯರ ಆಸೆಗೆ ತಣ್ಣೀರು ಎರಚಿದಂತಾಗಿದೆ.

For All Latest Updates

ABOUT THE AUTHOR

...view details