ವಿಜಯಪುರ: ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ ಮತ್ತೊಬ್ಬ ಪತ್ರಕರ್ತ ಬಲಿಯಾಗಿದ್ದಾರೆ. ಸ್ಥಳೀಯ ಗುಂಬಜ್ ಎಕ್ಸ್‌ಪ್ರೆಸ್ ದಿನಪತ್ರಿಕೆಯ ಸಹಸಂಪಾದಕ ದತ್ತಾತ್ರೇಯ ಪನಾಳಕರ್(50) ಮೃತಪಟ್ಟಿದ್ದಾರೆ.
ವಿಜಯಪುರ: ಕೊರೊನಾಗೆ ಮತ್ತೊಬ್ಬ ಪತ್ರಕರ್ತ ಬಲಿ - ವಿಜಯಪುರದಲ್ಲಿ ಕೊರೊನಾಗೆ ಮತ್ತೊಬ್ಬ ಪತ್ರಕರ್ತ ಬಲಿ
ಸ್ಥಳೀಯ ಗುಂಬಜ್ ಎಕ್ಸ್‌ಪ್ರೆಸ್ ದಿನಪತ್ರಿಕೆಯ ಸಹ ಸಂಪಾದಕರಿಗೆ ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ದೃಢವಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಕೊರೊನಾಗೆ ಮತ್ತೊಬ್ಬ ಪತ್ರಕರ್ತ ಬಲಿ
ಗ್ಯಾಂಗ್ ಬಾವಡಿ ನಿವಾಸಿಯಾಗಿದ್ದ ಇವರಿಗೆ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ದೃಢವಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ಗೆ ನಾಲ್ವರು ಪತ್ರಕರ್ತರು ಬಲಿಯಾಗಿದ್ದಾರೆ.