ಕರ್ನಾಟಕ

karnataka

ETV Bharat / state

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್​ ತಾಲೂಕು ಘಟಕದಿಂದ ಪ್ರತಿಭಟನೆ - Taluk President Prabhgowda Patil

ತೈಲ ಬೆಲೆ ಏರಿಕೆ ಖಂಡಿಸಿ ಮುದ್ದೇಬಿಹಾಳ ಜೆಡಿಎಸ್ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಹಶೀಲ್ದಾರರಿಗೆ ಮನವಿ ಪತ್ರ ನೀಡಿದರು.

JDS Taluk unit protests over oil price hike in Muddebihaala
ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್​ ತಾಲೂಕು ಘಟಕದಿಂದ ಪ್ರತಿಭಟನೆ

By

Published : Jul 2, 2020, 10:17 PM IST

ಮುದ್ದೇಬಿಹಾಳ (ವಿಜಯಪುರ):ಪೆಟ್ರೋಲ್-ಡಿಸೇಲ್​ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜೆಡಿಎಸ್ ತಾಲೂಕು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಯಾರೊಬ್ಬರ ಅರಸೊತ್ತಿಗೆ ಅಲ್ಲ, ಗೂಂಡಾಗಿರಿ ಮಾಡುವುದಲ್ಲ. ಪ್ರಶ್ನಿಸುವವರನ್ನೇ ಜೈಲಿಗೆ ಕಳಿಸುವ ಪ್ರವೃತ್ತಿ ಸಲ್ಲದು. ಗಟ್ಟಿ ಇದ್ದರೆ ಆಡಳಿತ ಮಾಡಿ, ರಾಜಕೀಯ ಮನೆ ಸ್ವತ್ತಲ್ಲ ಎಂದು ಆಕ್ರೋಶ ಹೊರಹಾಕಿದರು.

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್​ ತಾಲೂಕು ಘಟಕದಿಂದ ಪ್ರತಿಭಟನೆ

ತಾಲೂಕಿನಲ್ಲಿ ಅಧಿಕಾರಿಗಳು ವಿಷಮ ವಾತಾವರಣ ಸೃಷ್ಟಿಸಬೇಡಿ, ನ್ಯಾಯದ ಪರವಾಗಿ ಅಧಿಕಾರಿಗಳು ಕೆಲಸ ಮಾಡಲಿ ಎಂದು ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಕೊರೊನಾ ಹಾವಳಿಯಿಂದ ಎಲ್ಲರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ.

ಈಗ ಬಿತ್ತನೆಯ ಸಮಯವಾಗಿದ್ದು ರೈತರು ಬೆಳೆಗಳಿಗೆ ಬೇಕಾದ ಅಗತ್ಯ ಕೀಟನಾಶಕಗಳನ್ನು, ಇಂಧನವನ್ನು ಸಿಂಪಡಿಸಲು ಪೆಟ್ರೋಲ್ ಡೀಸೆಲ್​​​​ ಅಗತ್ಯವಾಗಿದೆ. ಆದರೆ ಕೇಂದ್ರ ಸರ್ಕಾರ ನಿರಂತರವಾಗಿ ಬೆಲೆ ಹೆಚ್ಚಳ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ಮುಖಂಡ ರಸೂಲ್ ದೇಸಾಯಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಸಂಸಾರಸ್ಥರೇ ಅಧಿಕಾರದಲ್ಲಿಲ್ಲ. ಅವರಿಗೆ ಸಂಸಾರ ಎಂದರೆ ಏನು, ಹೆಂಡಿರು ಮಕ್ಕಳೆಂದರೆ ಏನು ಎಂಬುದೇ ಗೊತ್ತಿಲ್ಲ. ದೇಶದ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂಬ ಜ್ಞಾನ ಇಲ್ಲ.

ಲೀಟರ್‌ವೊಂದಕ್ಕೆ 30ರೂ. ಟ್ಯಾಕ್ಸ್ ಹಾಕುತ್ತಿದ್ದಾರೆ. ಇಂಧನ ಬೆಲೆ ಇಳಿಕೆ ಮಾಡದಿದ್ದರೆ ಸರ್ಕಾರವನ್ನು ಕಿತ್ತೆಸೆಯುವವರಿಗೆ ವಿರಮಿಸುವುದಿಲ್ಲ ಎಂದು ಹೇಳಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಭೀಮನಗೌಡ ಕೊಡಗಾನೂರ ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ತಹಶೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕಾಶೀನಕುಂಟಿ, ಜಿಲ್ಲಾ ಉಪಾಧ್ಯಕ್ಷ ಗುರು ದೇಶಮುಖ, ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಶಿವರಾಜ ಗುಂಡಕನಾಳ, ಈರಣ್ಣ ತಾರನಾಳ, ಎಂ.ಆರ್.ಕುಂಟೋಜಿ, ಆರ್.ಎಸ್.ಇಸ್ಲಾಂಪೂರ, ಶ್ರೀಶೈಲ ಭಿಕ್ಷಾವತಿಮಠ, ಮಹ್ಮದ್​ ರಫೀಕ ಕೊಡಗಲಿ, ಶಿವನಗೌಡ ಬಿರಾದಾರ ಮೊದಲಾದವರು ಇದ್ದರು.

ABOUT THE AUTHOR

...view details