ಕರ್ನಾಟಕ

karnataka

By

Published : Jun 9, 2019, 7:31 PM IST

ETV Bharat / state

'ಆಧುನಿಕ ಭಗೀರಥ ಎಂ.ಬಿ.ಪಾಟೀಲ್' ಪ್ರತಿಮೆ ನಿರ್ಮಾಣಕ್ಕೆ ಜೆಡಿಎಸ್ ಶಾಸಕ ಪ್ಲಾನ್

ಈ ಹಿಂದೆ KBJNL ಕಾಮಗಾರಿಗೆ ಕಾರಣೀಭೂತರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಂಚಿನ ಪ್ರತಿಮೆಯನ್ನು ಜೆಡಿಎಸ್ ಹಿರಿಯ ನಾಯಕ ಎಂ.ಸಿ.ಮನಗೂಳಿ ಸ್ಥಾಪಿಸಿ ಕೃತಜ್ಞತೆ ಸಲ್ಲಿಸಿದ್ದರು. ಈಗ ಅದೇ ಪ್ರೇರಣೆಯಿಂದ ಎಂ.ಬಿ. ಪಾಟೀಲರ ಪ್ರತಿಮೆ ಸ್ಥಾಪಿಸಲು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್​ ಚವ್ಹಾಣ ಮುಂದಾಗಿದ್ದಾರೆ.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ

ವಿಜಯಪುರ : ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ಜಿಲ್ಲೆಯ ಆಧುನಿಕ ಭಗೀರಥ ಎಂದು ಕರೆಯಿಸಿಕೊಳ್ಳುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ ಅವರ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದರು.

ತಿಡಗುಂದಿ ಶಾಖಾ ಕಾಲುವೆ ಹಾಗೂ ಜಲಸೇತುವೆ ಕಾಮಗಾರಿಯನ್ನು ಸಚಿವರ ಜತೆ ವೀಕ್ಷಿಸಿದ ನಂತರ ಮಾತನಾಡಿ, ಪಾಟೀಲರು ನನ್ನ ರಾಜಕೀಯ ಗುರುಗಳು ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗಜಿಲ್ಲೆಯಲ್ಲಿಕೈಗೊಂಡಿರುವ ನೀರಾವರಿ ಕಾಮಗಾರಿ ಲಕ್ಷಾಂತರ ರೈತರ ಬದುಕು ಕಟ್ಟಿ ಕೊಟ್ಟಿದೆ. ಈಗಲೂ ಸಾವಿರಾರು ರೈತರ ಮನೆಯಲ್ಲಿ ಪಾಟೀಲರ ಪೋಟೋಗೆ ಪೂಜೆ ಸಲ್ಲಿಸುತ್ತಾರೆ.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ

ಹೀಗಾಗಿ ಅವರ ಋಣ ತೀರಿಸಲು ತಾವು ವೈಯಕ್ತಿಕವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿ ಹೆದ್ದಾರಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಯೋಚಿಸಿದ್ದೇನೆ. ಇದಕ್ಕೆ ಜಿಲ್ಲೆಯ ರೈತರ ಬೆಂಬಲ ಸಹ ಇದೆ ಎಂದರು.

ABOUT THE AUTHOR

...view details