ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ವಿಜಯಪುರ : ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಪುನರುಚ್ಚಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೇರೆ ಪಕ್ಷಗಳಿಂದ ಆಫರ್ ಬಂದಿರುವುದು ನಿಜ. ಈಗ ಆಫರ್‌ಗಳ ವಿಷಯ ಅಪ್ರಸ್ತುತವಾಗಿದೆ. ಹೀಗಾಗಿ ಇದು ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಯಾವುದೇ ಮೂಮೆಂಟ್ ಸದ್ಯಕ್ಕಿಲ್ಲ ಎಂದ ಅವರು, ಒಂದು ಹಂತ ಇತ್ತು, ಈಗ ಮುಗಿದು ಹೋಗಿದೆ. ಈಗ ಯಾವುದೇ ಬದಲಾವಣೆ ಇಲ್ಲ, ಬೇರೆ ಪಕ್ಷಕ್ಕೆ ಹೋಗುವ ವಿಚಾರಗಳಿಲ್ಲ ಎಂದರು. ಬೇರೆ ಪಕ್ಷಗಳಿಂದ ಬಂದಿದ್ದ ಆಹ್ವಾನದ ಬಗ್ಗೆ ಮಾತನಾಡಲು ಇಚ್ಛೆಪಡದ ಶಾಸಕ ದೇವಾನಂದ ಚೌಹಾಣ್, ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಅದರ ಬಗ್ಗೆ ಹೆಚ್ಚು ಗಮನ ಹರಿಸಿದ್ದೇನೆ ಎಂದರು.
ಟಿಕೆಟ್ ಬಗ್ಗೆ ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ: ಆ ಮಾತುಗಳು ಈಗ ಬೇಡ ಎಂದ ಅವರು, ಸಿಂದಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ. ಜೆಡಿಎಸ್ದಿಂದ ಘೋಷಣೆಯಾದ ಶಿವಾನಂದ ಪಾಟೀಲ್ ಸೋಮಜಾಳ ನಿಧನ ಬಳಿಕ ಅವರ ಪತ್ನಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕೊನೆಗೆ ಅಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದು ದೇವೇಗೌಡ ಜಿ ಹಾಗೂ ಕುಮಾರಣ್ಣ, ಪಕ್ಷದ ಮುಖ್ಯಸ್ಥರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ :ಬಾದಾಮಿ ಕ್ಷೇತ್ರದಲ್ಲಿ ನಾಳೆ ಸಿದ್ದರಾಮಯ್ಯ ಪ್ರವಾಸ.. ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸತತ ಪ್ರಯತ್ನದ ಫಲವಾಗಿ, ಪಂಚರತ್ನ ಯಾತ್ರೆಯನ್ನು ರಾಜ್ಯಾದ ಎಲ್ಲಾ ಜಿಲ್ಲಾ ಹಾಗೂ ಕ್ಷೇತ್ರವಾರು ಕೈಗೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಜನ ಬೆಂಬಲವೂ ಇದೆ. ಅದಕ್ಕೆ ಸೂಕ್ತ ಉದಾಹರಣೆ ಎಂದರೆ ವಿಜಯಪುರ ಜಿಲ್ಲೆ ಎಂದು ಹೇಳಬಹುದು. ಈಗಾಗಲೇ ವಿಜಯಪುರದಲ್ಲಿ ಜೆಡಿಎಸ್ ಮೇಲೆ ಅನುಕಂಪವೂ ಹುಟ್ಟಿದೆ. ಒಂದು ಕಾಲದಲ್ಲಿ ಜಿಲ್ಲೆಯಿಂದ ಏಳು ಜನ ಜಾತ್ಯಾತೀತ ಜನತಾ ದಳದವರು ಆಯ್ಕೆಯಾಗಿದ್ದರು. ಈಗ 2023ರ ವಿಧನಾಸಭಾ ಚುನಾವಣೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಸೀಟುಗಳನ್ನು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ :ಬೆಂಗಳೂರಿನಲ್ಲಿ ಬೃಹತ್ ಉದ್ಯಾನವನ ಹಾಗೂ ಕೆಂಪೇಗೌಡ ಕಲ್ಲಿನ ಪ್ರತಿಮೆ : ಸಚಿವ ಆರ್ ಅಶೋಕ್
ಹೆಚ್ಚಿನ ಸೀಟುಗಳನ್ನು ಗೆಲ್ಲಲು ಒಗ್ಗಟ್ಟಾಗಿ ಕೆಲಸ: ಯಾವ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿರುವ ಕ್ಷೇತ್ರಗಳು. ಉದಾಹರಣೆಗೆ ದೇವರಹಿಪ್ಪರಗಿ, ಇಂಡಿ, ಬಸವನ ಬಾಗೇವಾಡಿ, ಕ್ಷೇತ್ರಗಳನ್ನು ತೆಗೆದುಕೊಳ್ಳಬಹುದು. ಇನ್ನು ನಮ್ಮ ಕ್ಷೇತ್ರ ಎಂದರೆ ನಾಗಠಾಣ ಕ್ಷೇತ್ರ. ಇದು ಎಲ್ಲರಿಗೂ ಗುರುತಿರುವಂತಹದ್ದು. ಇವಿಷ್ಟು ಕ್ಷೇತ್ರಗಳಲ್ಲಿ ನಾವು ಆರಾಮಾಗಿ ಗೆಲುವು ಸಾಧಿಸಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಹೆಚ್ಚಿನ ಸೀಟುಗಳು ಗೆಲ್ಲಲು ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ :ಕೆ ಹೆಚ್ ಮುನಿಯಪ್ಪಗೆ ಟಿಕೆಟ್ ಘೋಷಣೆ ಸಾಧ್ಯತೆ.. ದೇವನಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಾಮೂಹಿಕ ರಾಜೀನಾಮೆ