ಕರ್ನಾಟಕ

karnataka

ETV Bharat / state

ಬೈಕ್​​​ಗಳ ನಡುವೆ ಡಿಕ್ಕಿ: ಜೆಡಿಎಸ್​​ ಶಾಸಕನ ಸಹೋದರ ಸಾವು - ಹಿಟ್ನಳ್ಳಿ ಬಳಿ ಬೈಕ್​ ಅಪಘಾತದಿಂದ ದೇವಾನಂದ ಚವ್ಹಾಣ ಸಹೋದರ ಸಾವು

ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರ ದೊಡ್ಡಪ್ಪನ ಮಗ ಗಂಗಾರಾಮ​ ಎನ್ನುವರು ಮೃತಪಟ್ಟಿದ್ದಾರೆ.

jds-mla-devanand-chavan-brother-dead-in-bike-accident
ಜೆಡಿಎಸ್ ಶಾಸಕರ ಸಹೋದರ ಸಾವು

By

Published : Jan 26, 2021, 10:49 PM IST

Updated : Jan 26, 2021, 11:17 PM IST

ವಿಜಯಪುರ: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರ ಸಹೋದರ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿ ತಾಂಡಾ ಬಳಿ ಈ ದುರ್ಘಟನೆ ನಡೆದಿದೆ. ಶಾಸಕ ದೇವಾನಂದ ಚವ್ಹಾಣ ಅವರ ದೊಡ್ಡಪ್ಪನ ಮಗ ಗಂಗಾರಾಮ ಚವ್ಹಾಣ (59) ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಗಂಗಾರಾಮ ಬೈಕ್​ನಲ್ಲಿ ದೇವರ ಹಿಪ್ಪರಗಿಗೆ ಹೋಗುತ್ತಿದ್ದಾಗ ಎದುರಿಗೆ ಬಂದ ಇನ್ನೊಂದು ಬೈಕ್​ಗೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಗಂಗಾರಾಮ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಓದಿ-ಪ್ರತಿಭಟನಾಕಾರರು ಭಯೋತ್ಪಾದಕರು, ಅವರಿಗೆ ಬೆಂಬಲಿಸಿದ ಎಲ್ಲರನ್ನೂ ಬಂಧಿಸಿ : ಕಂಗನಾ

ಮತ್ತೊಂದು ಬೈಕ್ ಸವಾರನಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ದೇವರಹಿಪ್ಪರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 26, 2021, 11:17 PM IST

ABOUT THE AUTHOR

...view details