ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ ಪಿಎಸ್​ಐ ವೈರಲ್ ಆಡಿಯೋದಲ್ಲಿ ಕೇಳಿಬಂದ ಸಾಹೆಬ್ರು ಯಾರು.. ಜೆಡಿಎಸ್ ನಾಯಕಿ ಪ್ರಶ್ನೆ

ಚುನಾವಣೆ ಸಂದರ್ಭದಲ್ಲಿ ಮುದ್ದೇಬಿಹಾಳ ಠಾಣೆ ಮಹಿಳಾ ಪಿಎಸ್​ಐ ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ತನಿಖೆಯಾಗಬೇಕು ಎಂದು ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ ಆಗ್ರಹಿಸಿದ್ದಾರೆ.

jds leader mangaladevi urges to investigate the muddebihala PSI viral audio case
ಪಿಎಸ್​ಐ ವೈರಲ್ ಆಡಿಯೋ ಪ್ರಕರಣದ ತನಿಖೆಗೆ ಜೆಡಿಎಸ್ ನಾಯಕಿ ಮಂಗಳಾದೇವಿ ಆಗ್ರಹ

By

Published : Jan 23, 2022, 7:54 PM IST

ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತ್​ ಚುನಾವಣೆ ಪೂರ್ವದಲ್ಲಿ ಮುದ್ದೇಬಿಹಾಳ ಪಿಎಸ್​ಐ ರೇಣುಕಾ ಜಕನೂರ ಅವರು ಆರನೇ ವಾರ್ಡಿನ ಅಭ್ಯರ್ಥಿಯ ಪುತ್ರನೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆದ ಪ್ರಕರಣದ ತನಿಖೆಯಾಗಬೇಕು ಎಂದು ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ ಆಗ್ರಹಿಸಿದ್ದಾರೆ.

ಪಿಎಸ್​ಐ ವೈರಲ್ ಆಡಿಯೋ ಪ್ರಕರಣದ ತನಿಖೆಗೆ ಜೆಡಿಎಸ್ ನಾಯಕಿ ಮಂಗಳಾದೇವಿ ಆಗ್ರಹ

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಕಗ್ಗೊಲೆಯಂತಹ ಘಟನೆ ಇದಾಗಿದೆ. ಆಡಿಯೋದಲ್ಲಿ ಸಾಹೇಬ್ರು ಎಂಬ ಪದ ಬಳಕೆ ಮಾಡಿದ್ದಾರೆ. ಅವರು ಯಾರು ? ಎಂಬುದು ಬಹಿರಂಗವಾಗಬೇಕು. ಅಧಿಕಾರಿಗಳು ನ್ಯಾಯ ಕೊಡಿಸುವ ಸ್ಥಾನದಲ್ಲಿರುವವರು ಪಕ್ಷಪಾತೀತರಾಗಿ ಯಾಕೆ ಕೆಲಸ ಮಾಡುತ್ತೀರಿ. ಶಿಸ್ತು ಬದ್ಧವಾಗಿ ಹೋದರೆ ಗೌರವ ಸಿಗುತ್ತದೆ. ಇಲ್ಲಿ ಅಧಿಕಾರಿ ರಾಜಕಾರಣಕ್ಕೆ ಪ್ರವೇಶಿಸಿದ್ದು ವೈರಲ್ ಆಗಿರುವ ಆಡಿಯೋದಲ್ಲಿ ಗೊತ್ತಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮುದ್ದೇಬಿಹಾಳ ಮಹಿಳಾ ಪಿಎಸ್​ಐ ವೈರಲ್ ಆಡಿಯೋ ​ಬಗ್ಗೆ ತನಿಖೆಗೆ ಆದೇಶ : ಎಸ್​​ಪಿ

ಗೃಹಮಂತ್ರಿ, ಎಸ್ಪಿ ಅವರು ಸದರಿ ಆಡಿಯೋ ಬಗ್ಗೆ ತನಿಖೆ ನಡೆಸಲಿ. ತಪ್ಪಿದ್ದರೆ ಪಿಎಸ್​ವೈ ವಿರುದ್ಧ ಕ್ರಮ ಜರುಗಿಸಲಿ, ಇಲ್ಲದಿದ್ದರೆ ಅವರು ನಿರ್ದೋಷಿ ಎಂದು ಸಾರಬೇಕು ಎಂದು ಆಗ್ರಹಿಸಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details