ಕರ್ನಾಟಕ

karnataka

ETV Bharat / state

ಲಸಿಕೆ ಪಡೆಯಲು ಬೀದಿ ಬದಿ ವ್ಯಾಪಾರಿಗಳಿಗೆ ನೋಂದಣಿ ಪತ್ರ ವಿತರಣೆ - Nalatwad Town Panchayat

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವ್ಯಾಪಾರಿಗಳಿದ್ದಲ್ಲಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಪತ್ರ ವಿತರಿಸಿದರು.

Vijayapura
ಬೀದಿ ಬದಿ ವ್ಯಾಪಾರಿಗಳಿಗೆ ನೋಂದಣಿ ಪತ್ರ ವಿತರಣೆ

By

Published : Jun 15, 2021, 7:29 AM IST

Updated : Jun 15, 2021, 8:01 AM IST

ಮುದ್ದೇಬಿಹಾಳ (ವಿಜಯಪುರ): ರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ತ್ವರಿತವಾಗಿ ಕೋವಿಡ್ ಲಸಿಕೆ ನೀಡಬೇಕೆಂದು ಸೂಚಿಸಿದೆ. ಹೀಗಾಗಿ, ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಖಾ ಎಸ್. ಬಾಗಲಕೋಟ ಅವರು ವ್ಯಾಪಾರಿಗಳಿದ್ದಲ್ಲಿಯೇ ಹೋಗಿ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಪತ್ರ ವಿತರಿಸಿದ್ದಾರೆ.

ನೋಂದಣಿ ಪತ್ರ ವಿತರಣೆ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಖಾ ಪ್ರತಿಕ್ರಿಯೆ

ವ್ಯಾಪಾರಿಗಳೇ ಕಚೇರಿಗೆ ಹೋಗಿ ನೋಂದಣಿ ಪತ್ರಕ್ಕಾಗಿ ಸರದಿ ಸಾಲಿನಲ್ಲಿ ನಿಂತರೂ ಬೇಗನೆ ದೊರೆಯಲಾರದ ಈ ಸಂದರ್ಭದಲ್ಲಿ ನಾಲತವಾಡ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊರೊನಾ ತೊಲಗಿಸಲು ಬೀದಿ ಬದಿ ವ್ಯಾಪಾರಗಳ ಪಾತ್ರವೂ ಬಹುಮುಖ್ಯ. ಹೀಗಾಗಿ, ಅವರಿದ್ದಲ್ಲಿಯೇ ತೆರಳಿ ನೋಂದಣಿ ಪತ್ರ ವಿತರಿಸಿದ್ದೇವೆ. ವ್ಯಾಪಾರಿಗಳು ವ್ಯಾಕ್ಸಿನೇಷನ್‌ ಕೇಂದ್ರಕ್ಕೆ ಹೋಗಿ ಈ ಪತ್ರ ತೋರಿಸಿದರೆ ಲಸಿಕೆ ಹಾಕ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಇಂದಿನಿಂದ ಶೈಕ್ಷಣಿಕ‌ ವರ್ಷ ಆರಂಭ.. ಯಾವುದೇ ಕಾರಣಕ್ಕೂ ಮುಂದೂಡಲ್ಲ ಎಂದ ಶಿಕ್ಷಣ ಇಲಾಖೆ

Last Updated : Jun 15, 2021, 8:01 AM IST

ABOUT THE AUTHOR

...view details