ಕರ್ನಾಟಕ

karnataka

ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಪ್ಲ್ಯಾಗ್ ಶಿಫ್ ಸಮ್ಮೇಳನ‌ ಆಯೋಜನೆ

By

Published : Nov 18, 2022, 10:57 PM IST

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಫ್ಲಾಗಶಿಫ್ ಇವೆಂಟ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇದೇ ನ.20, 21,22 ರಂದು ಆಯೋಜಿಸಲಾಗಿದೆ.

Kn_Vjp
ಅಂತರಾಷ್ಟ್ರೀಯ ಪ್ಲ್ಯಾಗ್ ಶಿಫ್ ಸಮ್ಮೇಳನ‌ ಆಯೋಜನೆ

ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್​ಡಿಎ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಉತ್ತರ ಕರ್ನಾಟಕದಲ್ಲಿ‌ ಮೊದಲು ಬಾರಿಗೆ IEEE- NKCo_2022 ಫ್ಲಾಗಶಿಫ್ ಇವೆಂಟ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇದೇ ನ.20, 21,22 ರಂದು ಆಯೋಜಿಸಲಾಗಿದೆ ಎಂದು ಡಾ.ವಿ.ಜಿ.ಸಂಗಮ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಶೋಧನಾ ವಿಜ್ಞಾನಿಗಳು, ಎಂಜಿನಿಯರ್ಸ್ ಮತ್ತು ಸಂಶೋಧನಾಕಾರರಿಗೆ ಅವರ ಸಂಶೋಧನಾ ವರದಿ ಮಂಡಿಸಲು ಮತ್ತು‌ ಆಸಕ್ತಿಯ ಕ್ಷೇತ್ರಗಳನ್ನು ಇನ್ನಷ್ಟು ಸಂಶೋಧನೆ ಮಾಡಲು ಉತ್ತಮ ವೇದಿಕೆಯಾಗಲಿದೆ ಎಂದರು. IEEE-NKCO-2022 ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇದೇ ಮೊದಲು ಬಾರಿ ವಿಜಯಪುರದಲ್ಲಿ ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ಸಮ್ಮೇಳನಕ್ಕೆ ಪೂರ್ವ ತಯಾರಿ ನಡೆಸಲಾಗುತ್ತಿತ್ತು.‌

ಸಮ್ಮೇಳನದಲ್ಲಿ ದೇಶ ಮತ್ತು ವಿದೇಶಗಳ ಸಂಶೋಧನಾ ಲೇಖಕರು, ಆನ್​ಲೈನ್ ಮತ್ತ ಪೋಸ್ಟ್ ಮೂಲಕ 900 ಸಂಶೋಧನಾ ಲೇಖನಗಳು ಬಂದಿದ್ದವು. ನಮ್ಮ ನುರಿತ ಪ್ರೊಪೆಸರ್​ಗಳು ನಮ್ಮ ಕಾಲೇಜ್​ನ 37 ಲೇಖನ ಸಮೇತ ಒಟ್ಟು 344 ಲೇಖನಗಳನ್ನು ಆಯ್ಕೆ ಮಾಡಲಾಗಿದೆ. ಅವರು ಈ ಸಮ್ಮೇಳನದಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.

ಸಂಶೋಧನಾಕಾರರು ಮಂಡಿಸುವ ಸಂಶೋಧನಾ ಲೇಖನದಲ್ಲಿ ಅತ್ಯುತ್ತಮ ಲೇಖನಗಳಿಗೆ ಬಹುಮಾನ ಸಹ ನೀಡಲಾಗುವುದು. ಒಟ್ಟು 9 ವಿವಿಧ ವಿಷಯಗಳಲ್ಲಿ ತೀರ್ಪು ನೀಡಲಾಗುವುದು. 344ರಲ್ಲಿ ವಿದೇಶಿಯ 50ಸಂಶೋಧನೆಗಳನ್ನು ಮಂಡಿಸಲು ಆಯ್ಕೆಯಾಗಿವೆ. ವಿದೇಶಿ ಸಂಶೋಧಕರು ಆನ್​ಲೈನ್ ಹಾಗೂ ಆಫ್​ಲೈನ್ ಮೂಲಕ ಸಂಶೋಧನೆಯನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.

ಸಮ್ಮೇಳನದ ಉದ್ಘಾಟನೆ ನ.20ರಂದು ನಡೆಯಲಿದೆ ಗ್ವಾಲಿಯರ್ IIITM ನಿರ್ದೇಶಕ ಡಾ.ಎಸ್.ಎನ್ ಸಿಂಗ್ ಉದ್ಘಾಟನೆ ನೇರವೇರಿಸಲಿದ್ದಾರೆ. ನಾರ್ವೆ ದೇಶದ ವೆಸ್ಟರ್ನ್ ನಾರ್ವೆ ವಿಶ್ವವಿದ್ಯಾಲಯದ ಪ್ರೋ.ಡಾ.ಜೇರಿ ಚೊನ್, ಇಸ್ರೋ ಉಪನಿರ್ದೇಶಕ ಯು.ಆರ್‌.ರಾವ್, ಸೈಟ್​ಲೈಟ್ ಕೇಂದ್ರದ ಆರ್.ವಿ.ನಾಡಗೌಡ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಭಾಗವಹಿಸುವ ಎಲ್ಲ ಸಂಶೋಧಕರಿಗೆ ಹೋಟೆಲ್ ವ್ಯವಸ್ಥೆ, ಕೇಂದ್ರ ಬಸ್ ನಿಲ್ದಾಣದಿಂದ ವೇದಿಕೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದನ್ನೂ ಓದಿ:ಸ್ಟಾರ್ಟ್​ ಅಪ್‌ಗಳ ನೆರವಿಗೆ ಬೂಸ್ಟರ್ ಕಿಟ್‌ ಉಪಕ್ರಮ, 9 ಒಡಂಬಡಿಕೆಗೆ ಅಂಕಿತ

ABOUT THE AUTHOR

...view details