ವಿಜಯಪುರ: ವಿದ್ಯಾರ್ಥಿ ಕ್ಷೇಮಪಾಲನ ಯೋಜಿಸಿರುವ 16 ನೇ ಶಕ್ತಿ ಸಂಭ್ರಮ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರುಗಿತು.
ವಿಜಯಪುರದಲ್ಲಿ ಅಂತರ್ ಮಹಾವಿದ್ಯಾಲಯಗಳ ಯುವ ಜನೋತ್ಸವ ಕಾರ್ಯಕ್ರಮ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳು ನಮ್ಮ ನಡೆ-ನುಡಿ, ಕಲಿಕಾ ಶಕ್ತಿ, ಆಚಾರ-ವಿಚಾರಗಳಲ್ಲಿ ಬದಲಾವಣೆ ತರುತ್ತವೆ. ಕಲೆಯ ಬೆಳವಣಿಗೆಗೆ ಬೇಕಾದ ಮಹತ್ತರ ವಿಷಯಗಳು ಅನುಭವದ ರೀತಿಯಲ್ಲಿ ಬರುತ್ತದೆ. ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಕೊಂಡರೆ ಜೀವನದಲ್ಲಿ ಉತ್ತಮ ಬೆಳವಣಿಗೆಯಾಗಲು ಸಹಾಯಕವಾಗುತ್ತದೆ. ನಮ್ಮ ನಡವಳಿಕೆಯಲ್ಲಿ ಭಕ್ತಿ, ಭಾವ, ಶ್ರದ್ದೆ, ಒಳ್ಳೆತನ ಇರಬೇಕು. ನಾವು ಕಲಿಯುವ ಒಳ್ಳೆಯ ನಡತೆಗಳು ಜೀವನದಲ್ಲಿ ಪೂರಕವಾಗಿರುತ್ತವೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕವಾಗಿ ಕಲಿಕೆ, ಚಿಂತನೆ ಇರಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡಿದ್ರು.
ರಂಗಕರ್ಮಿ ಭಾಗೀರಥಿ ಮಾತನಾಡಿ, ನಾವು ನಿಸ್ವಾರ್ಥದಿಂದ ಕನಸನ್ನ ಕಟ್ಟುತ್ತಾ ಹೋಗಿ ಶ್ರಮವಹಿಸಿದ್ರೆ ಒಂದಲ್ಲಾ ಒಂದು ದಿನ ಅದರ ಫಲ ಸಿಗುತ್ತದೆ. ವಿದ್ಯಾರ್ಥಿಗಳು ಕನಸು ಕಾಣಬೇಕು ಅಂದಾಗ ಮಾತ್ರ ಯಶಸ್ವಿಯಾಗಿಲು ಸಾಧ್ಯವಾಗುತ್ತದೆ. ನಡೆಯುವ ಮಾರ್ಗದಲ್ಲಿ ಸೋಲು ಗೆಲವು ಬರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಗಳ ಅನುಭವ ಜೀವನದಲ್ಲಿ ಯಶಸ್ಸಿನ ಹಾದಿ ತುಳಿಯಲು ಸಹಾಯವಾಗುತ್ತದೆ ಹಾಗೂ ನಮ್ಮನ್ನು ನಾವು ಸಮಾಜ ಮುಖಿ ಕಾರ್ಯದಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಸಮಗ್ರ ಪ್ರಶಸ್ತಿಯನ್ನು ಎಸ್ ಜೆ ಎಂ ವಿ ಕಾಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹುಬ್ಬಳ್ಳಿ ವಿದ್ಯಾರ್ಥಿನಿಯರು ಗಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ, ಖ್ಯಾತ ರಂಗಕರ್ಮಿ ಶ್ರೀಮತಿ ಭಾಗೀರಥಿ ಕದಂ ಭಾಗವಹಿಸಿದ್ದರು.