ಕರ್ನಾಟಕ

karnataka

ETV Bharat / state

ರಾಯಣ್ಣ ಪ್ರತಿಮೆಗೆ ಕೆಸರೆರಚಿದ ಕಿಡಿಗೇಡಿಗಳು: ವಿದ್ಯಾರ್ಥಿ ವೇದಿಕೆಯಿಂದ ಪ್ರತಿಭಟನೆ - rayanna statue in vijaypur

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದ ರಾಯಣ್ಣ ಪ್ರತಿಮೆಗೆ ಕಿಡಿಕೇಡಿಗಳು ಕೆಸರೆರಚಿದ್ದನ್ನು ಖಂಡಿಸಿ ರಾಯಣ್ಣ ವಿದ್ಯಾರ್ಥಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

insulting to sangolli rayanna statue in vijaypur
ರಾಯಣ್ಣ ಪ್ರತಿಮೆಗೆ ಕೆಸರು ಎರಚಿದ ಕಿಡಿಗೇಡಿಗಳು

By

Published : Sep 3, 2020, 6:15 PM IST

ವಿಜಯಪುರ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕೆಸರೆರಚಿ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಯಣ್ಣ ಪ್ರತಿಮೆಗೆ ಕೆಸರು ಎರಚಿದ ಕಿಡಿಗೇಡಿಗಳು

ಇಂಡಿ ತಾಲೂಕಿನ ಹಂಜಗಿ ಗ್ರಾಮದ ರಾಯಣ್ಣ ಪ್ರತಿಮೆಗೆ ಕೆಸರೆರಚಿದ ಅವಮಾನಗೊಳಿಸಿದ್ದಾರೆ ಎಂದು ಆರೋಪಿಸಲಾಯಿತು.

ಸ್ವಾತಂತ್ರ್ಯ ಹೋರಾಟಗಾರರಿಗೆ ಕಿಡಗೇಡಿಗಳು ಅಪಮಾನ ಮಾಡುತ್ತಿರುವುದು ಸರಿಯಲ್ಲ. ಈ ಕೃತ್ಯಕ್ಕೆ ಕಾರಣವಾದ ವ್ಯಕ್ತಿಗಳ ಪತ್ತೆ ಮಾಡಲು ಜಿಲ್ಲಾಡಳಿತ ಮುಂದಾಗುವಂತೆ ಪ್ರತಿಭಟನಾಕಾರು ಒತ್ತಾಯಿಸಿದರು.

ಜಿಲ್ಲಾಡಳಿ ಶೀಘ್ರವೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details