ವಿಜಯಪುರ: ನಗರದ ಸೀಲ್ಡೌನ್ ಪ್ರದೇಶಗಳಲ್ಲಿ ಜನರ ಮೇಲೆ ನಿಗಾ ವಹಿಸಲು ಪೊಲೀಸ್ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದೆ.
ಸೀಲ್ಡೌನ್ ಪ್ರದೇಶಗಳಲ್ಲಿನ ಜನರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಕೆ
ವಿಜಯಪುರದಲ್ಲಿನ ಸೀಲ್ಡೌನ್ ಪ್ರದೇಶಗಳಲ್ಲಿ ಜನರ ಮೇಲೆ ನಿಗಾ ವಹಿಸಲು ಪೊಲೀಸ್ ಇಲಾಖೆ 20ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಿದೆ.
ಸೀಲ್ಡೌನ್ ಪ್ರದೇಶಗಳಲ್ಲಿನ ಜನರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಕೆ
ನಗರದ ಸ್ಟೇಷನ್ ರಸ್ತೆ ರೆಡ್ ಝೋನ್ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಮಾತ್ರೆ, ತರಕಾರಿ ಸೇರಿದಂತೆ ಹಲವು ನೆಪ ಹೇಳಿಕೊಂಡು ಸಾರ್ವಜನಿಕರು ಓಡಾಟ ಮುಂದುವರೆಸಿದ್ದರು. ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದರೂ ಜನರು ಕ್ಯಾರೆ ಅನ್ನುತ್ತಿರಲಿಲ್ಲ. ಹೀಗಾಗಿ ರೆಡ್ ಝೋನ್ ಪ್ರದೇಶದಲ್ಲಿ ಜನ ಸಂಚಾರದ ಮೇಲೆ ತೀವ್ರ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದೆ.
ಇನ್ನೂ, ಬಡೆಕಮಾನ್ ಕ್ರಾಸ್, ಗೋಲ್ ಗುಂಬಜ್, ಹಕ್ಕಿಂ ಚೌಕ್ ಸೇರಿದಂತೆ ಜನ ದಟ್ಟಣೆಯಾಗುವ ಪ್ರದೇಶದಲ್ಲಿ ಜಿಲ್ಲಾಡಳಿತ 20ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದೆ.