ಮುದ್ದೇಬಿಹಾಳ :ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ 5.40 ಕೋಟಿ ರೂ. ಬಹು ಗ್ರಾಮ ಕುಡಿವಯು ನೀರಿನ ಯೋಜನೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ತಾಳಿಕೋಟಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
₹5.40 ಕೋಟಿ ಬಹುಗ್ರಾಮ ಕುಡಿವ ನೀರಿನ ಯೋಜನೆ ವಿಫಲ.. ತಹಶೀಲ್ದಾರ್‌ಗೆ ಮನವಿ - villagers appeal
ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ತಾಲೂಕಿನ ವ್ಯಾಪ್ತಿಯ ಮೂಕಿಹಾಳ ಗ್ರಾಪಂನ 7 ಹಳ್ಳಿಗಳಿಗೆ ನೀರು ಒದಗಿಸುವ ಬಹು ಗ್ರಾಮ ಕುಡಿವ ನೀರಿನ ಯೋಜನೆ ಅಡಿ ಸಮರ್ಪಕ ನೀರು ಬರುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯುಂಟಾಗಿದೆ..
ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ತಾಲೂಕಿನ ವ್ಯಾಪ್ತಿಯ ಮೂಕಿಹಾಳ ಗ್ರಾಪಂನ 7 ಹಳ್ಳಿಗಳಿಗೆ ನೀರು ಒದಗಿಸುವ ಬಹು ಗ್ರಾಮ ಕುಡಿವ ನೀರಿನ ಯೋಜನೆ ಅಡಿ ಸಮರ್ಪಕ ನೀರು ಬರುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯುಂಟಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ, ಗ್ರಾಮಸ್ಥರು ತಾಳಿಕೋಟಿ ತಹಶೀಲ್ದಾರ್ ಅನಿಲ್‌ಕುಮಾರ್ ಢವಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮಸ್ಥ ಶಿವರಾಜ ನಾಗೂರ್, 5.40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹುಹಳ್ಳಿ ಕುಡಿವ ನೀರಿನ ಯೋಜನೆ 2013-14ನೇ ಸಾಲಿನಲ್ಲಿ ಮಂಜೂರಾಗಿದೆ. ಆದರೆ, ಈವರೆಗೆ ಯಾವ ಹಳ್ಳಿಗೂ ಸರಿಯಾಗಿ ನೀರು ಸರಬರಾಜಾಗಿಲ್ಲ. ಈ ಯೋಜನೆಯ ಉದ್ದೇಶವೇ ತಲೆಕೆಳಗಾಗಿದೆ. ಇನ್ನು 8 ದಿನಗಳಲ್ಲಿ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.