ಕರ್ನಾಟಕ

karnataka

ETV Bharat / state

ಟರ್ಕಿ, ಸಿರಿಯಾ ಭೂಕಂಪದಲ್ಲಿ ಸಂಬಂಧಿಕರು ಸಿಲುಕಿದ್ದರೆ ಮಾಹಿತಿ ನೀಡಿ- ವಿಜಯಪುರ ಡಿಸಿ - ವಿಜಯಪುರ ಜಿಲ್ಲಾಡಳಿತ ದೂರವಾಣಿ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಲ್ಲಿ ವಿಜಯಪುರದ ನಾಗರಿಕರು ಸಿಲುಕಿಕೊಂಡಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಡಿಸಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ

By

Published : Feb 9, 2023, 4:18 PM IST

ವಿಜಯಪುರ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಲ್ಲಿ ಜಿಲ್ಲೆಯ‌ ನಾಗರಿಕರು, ಸಂಬಂಧಿಕರು ಸಿಲುಕಿಕೊಂಡಿದ್ದರೆ ಕುಟುಂಬ ಸದಸ್ಯರು ವಿಜಯಪುರ ಜಿಲ್ಲಾಡಳಿತಕ್ಕೆ ಸಂಪರ್ಕಿಸಿ. ಎಲ್ಲಾ ರೀತಿಯ ನೆರವು ನೀಡಲು ಜಿಲ್ಲಾಡಳಿತ ಸಿದ್ದವಾಗಿದೆ. ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಅವರ ಮೂಲಕ ಸರ್ಕಾರ ರಕ್ಷಣೆಗೆ ಮುಂದಾಗಲಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.‌

ಭೂಕಂಪದ ಬಳಿಕ ಇಲ್ಲಿಯವರೆಗೆ ಯಾರೂ ಜಿಲ್ಲಾಡಳಿತವನ್ನು ಸಂಪರ್ಕಿಸಿಲ್ಲ. ಕುಟುಂಬಸ್ಥರು ಅಥವಾ ಪರಿಚಯಸ್ಥರು ಸಿಲುಕಿಕೊಂಡಿದ್ದರೆ ತಕ್ಷಣ ಸಂಪರ್ಕಿಸಿ, ಅಗತ್ಯ ಮಾಹಿತಿ ನೀಡಿ. ದೂರವಾಣಿ ಸಂಖ್ಯೆ: 080-1070, 080-22340676 ಇಲ್ಲವೇ ಇಮೇಲ್: seockarataka@gmail.com ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ABOUT THE AUTHOR

...view details