ವಿಜಯಪುರ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಕಂಡುಬರುತ್ತಿದೆ. ಜಲಾಶಯ ಪಾತ್ರ ಗ್ರಾಮಗಳು ಅಪಾಯ ಎದುರಿಸುವ ಸಾಧ್ಯತೆ ಇದ್ದು, ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕೆಂದು ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಪಾಲ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ. ಜಲಾಶಯದ ಕೆಳ ಪ್ರದೇಶದಲ್ಲಿ ಬಾಧಿತರಾಗುತ್ತಿರುವ ಗ್ರಾಮಗಳು ಹಾಗೂ ನಗರಗಳ ಜನ, ಜಾನುವಾರು, ಆಸ್ತಿಪಾಸ್ತಿ, ನೀರಿನ ಪಂಪ್ಸೆಟ್ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ: ನದಿಪಾತ್ರದ ಜನರಿಗೆ ಎಚ್ಚರಿಕೆ - ಕೃಷ್ಣಾ ಭಾಗ್ಯ ಜಲ ನಿಗಮ
ಮಹಾರಾಷ್ಟ್ರದಲ್ಲಿ ಸದ್ಯದ ರೀತಿಯಲ್ಲೇ ಮಳೆ ಮುಂದುವರೆದರೆ ಅಣೆಕಟ್ಟೆಯಿಂದ ಯಾವಾಗ ಬೇಕಾದರೂ ನೀರು ಹೊರ ಬಿಡುವ ಸಾಧ್ಯತೆಯಿದೆ.
![ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ: ನದಿಪಾತ್ರದ ಜನರಿಗೆ ಎಚ್ಚರಿಕೆ Alamatty Reservoir](https://etvbharatimages.akamaized.net/etvbharat/prod-images/768-512-15784865-thumbnail-3x2-matti.jpg)
ತಗ್ಗಿದ ಒಳಹರಿವು: ನಿನ್ನೆ 78,390 ಕ್ಯೂಸೆಕ್ನಷ್ಟಿದ್ದ ಒಳಹರಿವು ಇಂದು ಸ್ವಲ್ಪಮಟ್ಟಿಗೆ ತಗ್ಗಿದ್ದು 75,149 ಕ್ಯೂಸೆಕ್ ಇದೆ. ಸದ್ಯ ಜಲಾಶಯದಲ್ಲಿ 516.37 ಮೀಟರ್ ನೀರು ಸಂಗ್ರಹವಿದೆ. ನಿನ್ನೆ ಈ ಪ್ರಮಾಣ 515,77 ಮೀಟರ್ ಇತ್ತು. ಜಲಾಶಯದ ಇಂದಿನ ಸಂಗ್ರಹ 59.412 ಟಿಎಂಸಿ ಇದೆ. ಮಹಾರಾಷ್ಟದಲ್ಲಿ ಇದೇ ಪ್ರಮಾಣದಲ್ಲಿ ಮಳೆ ಮುಂದುವರೆದರೆ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಅಣೆಕಟ್ಟೆಯ ಹೊರಹರಿವಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಜಲಾಶಯಕ್ಕೆ ಹೆಚ್ಚುವರಿ ನೀರು ಬಿಡುಗಡೆಯಾದರೆ ಹೊರಹರಿವಿನ ಪ್ರಮಾಣ ಹೆಚ್ಚಲಿದೆ.
ಇದನ್ನೂ ಓದಿ:ಭಾಗಮಂಡಲದಲ್ಲಿ ರಸ್ತೆ ಸಂಚಾರ ಕಡಿತ; ಭೂಕಂಪನದಿಂದ ಬೆಚ್ಚಿದ ಗಡಿಭಾಗದ ಜನತೆ