ವಿಜಯಪುರ:ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಹತ್ಯೆ ಮಾಡಿದ ಕಾಮುಕರನ್ನು ಗಲ್ಲಿಗೇರಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಭಾರತ ಯುವ ವೇದಿಕೆ ಚಾರಿಟಬಲ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಶುವೈದ್ಯ ಹತ್ಯೆಗೆ ಖಂಡನೆ: ಭಾರತ ಯುವ ವೇದಿಕೆ ಚಾರಿಟಬಲ್ ಕಾರ್ಯಕರ್ತರ ಪ್ರತಿಭಟನೆ - ವಿಜಯಪುರ ಪ್ರತಿಭಟನೆ ಸುದ್ದಿ
ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಹತ್ಯೆ ಮಾಡಿದ ಕಾಮುಕರನ್ನು ಗಲ್ಲಿಗೇರಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಭಾರತ ಯುವ ವೇದಿಕೆ ಚಾರಿಟಬಲ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭಾರತ ಯುವ ವೇದಿಕೆ ಚಾರಿಟೇಬಲ್ ಸಂಘಟನೆ
ಇತ್ತೀಚೆಗೆ ಮಹೆಬೂಬ್ ನಗರ ಸಮೀಪದ ಚಟ್ಟಣಪಲ್ಲಿಯಲ್ಲಿ ಪಶುವೈದ್ಯೆ ಮೇಲೆ ಲಾರಿ ಚಾಲಕರು ಸಾಮೂಹಿಕ ಅತ್ಯಾಚಾರ ಮಾಡಿ ಸಜೀವ ದಹನ ಮಾಡಿದ್ದರು. ಈ ಘಟನೆಯನ್ನ ಸಂಘಟನೆ ಕಾರ್ಯಕರ್ತರು ಖಂಡಿಸಿ, ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಇನ್ನು ಈ ಸಂಬಂಧ ಡಿಸಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್.ಪ್ರಸನ್ನ ತಮ್ಮ ಮನವಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.