ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನದ ಹಿಂದೆ 120 ರೂಪಾಯಿಗೆ ಮಾರಾಟವಾಗುತ್ತಿದ್ದ 1 ಕೆ.ಜಿ ಚಿಕನ್ ಬೆಲೆ 240 ಏರಿಕೆಯಾಗಿದೆ.
ಈದ್ ಹಿನ್ನೆಲೆ ಹೆಚ್ಚಾಯ್ತು ಚಿಕನ್ ಬೆಲೆ, 120ರಿಂದ 240ಕ್ಕೆ ಏರಿದ ದರ - ವಿಜಯಪುರದಲ್ಲಿ ಕೊರೊನಾ ಪ್ರಕರಣಗಳು
ವಿಜಯಪುರದಲ್ಲಿ ಕೋಳಿ ಮಾಂಸದ ಬೆಲೆ ಗಗನ್ನಕ್ಕೇರಿದೆ. ಆದರೂ ಚಿಕನ್, ಮಟನ್ ಖರೀದಿಸಲು ಜನ ಸಾಲುಗಟ್ಟಿ ನಿಂತಿದ್ದಾರೆ.
ವಿಜಯಪುರದಲ್ಲಿ ಈದ್ ಹಿನ್ನೆಲೆ ಹೆಚ್ಚಾಯ್ತು ಮಾಂಸದ ಬೆಲೆ!
ನಗರದ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಚಿಕನ್ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಈದ್ ಹಿನ್ನೆಲೆಯಲ್ಲಿ ಮಾಂಸದ ಬೆಲೆ ಗಗನಕ್ಕೇರಿದೆ. ಲಾಕ್ಡೌನ್ ಎಫೆಕ್ಟ್‌ನಿಂದ ಕೋಳಿ ಸಿಗದ ಕಾರಣ ಚಿಕನ್ ಬೆಲೆ ಏರಿಸಲಾಗಿದೆ.
ಭಾನುವಾರವಾದ ಕಾರಣ ಜನ ಬಾಡೂಟ ಮಾಡಲು ದುಬಾರಿ ಬೆಲೆ ಕೊಟ್ಟು ಚಿಕನ್ ಖರೀದಿ ಮಾಡಬೇಕಾದ ಅನಿವಾರ್ಯ ಬಂದಿದೆ. ಇತ್ತ ರಂಜಾನ್ ಹಬ್ಬದ ನಿಮಿತ್ತ ಚಿಕನ್ ಬೆಲೆಯಲ್ಲಿ ಏರಿಕೆಯಾಗಿದೆ .ಇನ್ನೂ ಕಳೆದ ವಾರ 550 ರೂಪಾಯಿಗೆ ಮಾರಾಟವಾಗುತ್ತಿದ್ದ ಮಟನ್ 640 ರೂಪಾಯಿಗೆ ಮಾರಾಟವಾಗುತ್ತಿದೆ.