ಕರ್ನಾಟಕ

karnataka

ETV Bharat / state

ಚಪ್ಪಲಿ ಹರಿಯುವಷ್ಟು ಸುತ್ತಾಡಿ ಜಿಲ್ಲೆಗೆ ಹಣ ತಂದಿದ್ದೇನೆ: ರಮೇಶ ಜಿಗಜಿಣಗಿ - Ramesh Gigijana on development works

ಕಾಮಗಾರಿ ಮಂಜೂರು ಮಾಡಲು ಹಾಗು ಅದಕ್ಕೆ ಹಣ ಬಿಡುಗಡೆ ಮಾಡಲು ದೆಹಲಿಯಲ್ಲಿ ಫೈಲ್ ತೆಗೆದುಕೊಂಡು ಹೋಗಿ ಚಪ್ಪಲಿ ಹರಿಯುವಷ್ಟು ಸುತ್ತಾಡಿದ ಮೇಲೆ ಈ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

Inauguration of Railway Overbridge at Vijayapura
ವಿಜಯಪುರದಲ್ಲಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ

By

Published : Mar 2, 2021, 10:09 PM IST

ವಿಜಯಪುರ : ಎರಡು ಅವಧಿಯ 10 ವರ್ಷದ ಸಂಸದನಾಗಿ ಜಿಲ್ಲೆಯಲ್ಲಿ ಮೂರು ಯೋಜನೆಗಳನ್ನು ಪೂರ್ಣಗೊಳಿಸಿದ್ದೇನೆ. ಈ ಯೋಜನೆ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕರೆಸುವ ಆಸೆ ಇದ್ದು, ಅದಕ್ಕಾಗಿ ಈಗಾಗಲೇ ಪ್ರಧಾನಿ ಕಚೇರಿಗೆ ಪತ್ರ ಬರೆದು ಸಮಯ ನೀಡುವಂತೆ ಕೋರಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಇಬ್ರಾಹಿಂಪುರ ರೈಲ್ವೆ ಸ್ಟೇಶನ್ ಸಮೀಪದ ಎಲ್​ಸಿ ‌ಗೇಟ್ -80 ಬದಲಿಗೆ ನಿರ್ಮಿಸಿರುವ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ತನ್ನ 10 ವರ್ಷದ ಅವಧಿಯಲ್ಲಿ ಕೂಡಗಿ ವಿದ್ಯುತ್ ಸ್ಥಾವರ, ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಹಾಗೂ ಗದಗ- ಹುಟಗಿ ರೈಲ್ವೆ ಮಾರ್ಗದ ಡಬ್ಲಿಂಗ್ ಯೋಜನೆ ಪೂರ್ಣಗೊಳಿಸಿದ್ದೇನೆ. ಇದಕ್ಕಾಗಿ ಕೇಂದ್ರದಿಂದ 36 ಸಾವಿರ ಕೋಟಿ ರೂ. ಹಣ ತಂದಿದ್ದೇನೆ. ಇಷ್ಟು ದೊಡ್ಡ ಮಟ್ಟದ ಹಣ ಜಿಲ್ಲೆಗೆ ಬಂದಿರುವುದು ನನ್ನ ಅವಧಿಯಲ್ಲಿ‌ ಮಾತ್ರ. ಕೆಲವರು ಏನು ಕೆಲಸ ಮಾಡಿದ್ದಾರೆ ಎಂದು ಟೀಕಿಸುತ್ತಾರೆ. ಅವರಿಗೆ ಈ ಕಾಮಗಾರಿಗಳೇ ಉತ್ತರವಾಗಿದೆ. ವಿಜಯಪುರಕ್ಕೆ ಈ ಹಿಂದೆ ಒಂದು ನೈಯಾ ಪೈಸೆ ಬಿಡುಗಡೆಯಾಗಿಲ್ಲ. ಹಾಗಾದರೆ ಹಿಂದೆ ಸಂಸದರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕಾಮಗಾರಿ ಮಂಜೂರು ಮಾಡಲು, ಅದಕ್ಕೆ ಹಣ ಬಿಡುಗಡೆ ಮಾಡಲು ದೆಹಲಿಯಲ್ಲಿ ಫೈಲ್ ತೆಗೆದುಕೊಂಡು ಹೋಗಿ ಚಪ್ಪಲಿ ಹರಿಯುವಷ್ಟು ಸುತ್ತಾಡಿದ ಮೇಲೆ ಈ ಯೋಜನೆಗಳು ಆಗಿವೆ. ಇದು ನಾನು ನಿಮಗೆ ಉಪಕಾರ ಮಾಡಿದ್ದೇನೆ ಎಂದು ತಿಳಿದುಕೊಳ್ಳಬೇಡಿ, ನೀವು ಓಟ್ ಹಾಕಿ ದೆಹಲಿಗೆ ಕಳುಹಿಸಿದ್ದಕ್ಕೆ ಈ ಕೆಲಸ ಮಾಡಿದ್ದೇನೆ. ಇದರಲ್ಲಿ ನಾನು ಯಾವುದೇ ಉಪಕಾರ ಮಾಡಿಲ್ಲ. ಕೆಲ ನನ್ನ ವಿರೋಧಿಗಳು ಜಿಗಜಿಣಗಿ ಏನು ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದರು, ಜನ ನನ್ನನ್ನು ಬೈದಿದ್ದೂ ಉಂಟು. ಆದರೂ ಚುನಾವಣೆಯಲ್ಲಿ ಕೊನೆಗೆ ನನಗೆ ಓಟು ಹಾಕುತ್ತಾರೆ ಎಂದು ಹೇಳಿದರು.

ಯತ್ನಾಳ್ ಗೈರು: ಮೇಲ್ಸೇತುವೆ ಉದ್ಘಾಟನೆಯ ಅಧ್ಯಕ್ಷತೆ ವಹಿಸಬೇಕಾಗಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಯತ್ನಾಳ್ ರಾಜಕೀಯ ವಿರೋಧಿಯಾಗಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details