ಕರ್ನಾಟಕ

karnataka

ETV Bharat / state

ದಸರಾ ಆಚರಣೆಗೆ ಸಿದ್ಧವಾಗ್ತಿದೆ ವಿಜಯಪುರ: ತುಳಜಾಭವಾನಿಗೆ ಇಲ್ಲಿ ಅಸಂಖ್ಯಾತರೇ ಭಕ್ತರು - ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯ ತುಳಜಾಭವಾನಿ

ನಾಡಹಬ್ಬ ದಸರಾ ಆಚರಣೆಗೆ ವಿಜಯಪುರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂಭತ್ತು ದಿನ ನಡೆಯುವ ನವರಾತ್ರಿಯಲ್ಲಿ ದಾಂಡಿಯಾ, ಗೊಂದಳಿ, ವಿಶೇಷ ಪೂಜಾ ಕೈಂಕರ್ಯಗಳು ಬಹು ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಲಿವೆ.

ದಸರಾ ಆಚರಣೆಗೆ ಸಿದ್ಧವಾಗ್ತಿದೆ ವಿಜಯಪುರ

By

Published : Sep 23, 2019, 6:13 PM IST

ವಿಜಯಪುರ:ನಾಡಹಬ್ಬ ದಸರಾ ಆಚರಣೆಗೆ ಜಿಲ್ಲೆ ಸಿದ್ಧವಾಗ್ತಿದ್ದು, ನೆರೆಯ ಮಹಾರಾಷ್ಟ್ರ ರಾಜ್ಯದ ಉಸ್ಮಾನಬಾದ್ ಜಿಲ್ಲೆಯ ತುಳಜಾಭವಾನಿ ಕ್ಷೇತ್ರದಲ್ಲಿ ನೆಲೆಸಿರುವ ಜಗನ್ಮಾತೆ, ಆದಿಶಕ್ತಿ ಸ್ವರೂಪಿಣಿ ತಾಯಿ ತುಳಜಾಭವಾನಿಗೆ ವಿಜಯಪುರದಲ್ಲಿ ಅಸಂಖ್ಯಾತ ಭಕ್ತರಿದ್ದಾರೆ.

ಒಂಭತ್ತು ದಿನ ನಡೆಯುವ ನವರಾತ್ರಿಯಲ್ಲಿ ದಾಂಡಿಯಾ, ಗೊಂದಳಿ, ವಿಶೇಷ ಪೂಜಾ ಕೈಂಕರ್ಯಗಳು ಬಹು ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಲಿವೆ. ವಿಜಯಪುರ ನಗರದಲ್ಲಿಯೇ
ತುಳಜಾಭವಾನಿಯ ಸುಮಾರು 9 ದೇವಸ್ಥಾನಗಳು ಇವೆ‌. ಈ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜೆ, ಹೋಮ ಹವನ ಆಯೋಜಿಸುತ್ತಾರೆ.

ದಸರಾ ಆಚರಣೆಗೆ ಸಿದ್ಧವಾಗ್ತಿದೆ ವಿಜಯಪುರ

ವಿವಿಧ ಗಲ್ಲಿಗಳಲ್ಲಿ ಸಾರ್ವಜನಿಕರು ದೇವಿ ಮೂರ್ತಿ ಪ್ರತಿಷ್ಠಾಪಿಸಿ ದಾಂಡಿಯಾ, ವಿವಿಧ ಸಾಂಸ್ಕೃತಿಕ, ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿ, ಶಹಾಪೇಟ ,ಮಠಪತಿ ಗಲ್ಲಿ, ಜೋರಾಪುರ ಪೇಠ, ಶಾಹು ನಗರ, ಕೋರಿ ಚೌಕ್, ಮಿಲನ ಸರ್ಕಲ್ ಸೇರಿದಂತೆ ಹತ್ತು ಹಲವು ಕಡೆ ಸಾರ್ವಜನಿಕರು ದೇವಿ ಪ್ರತಿಷ್ಠಾಪಿಸಿ ಭಕ್ತಿ ಮೆರೆಯುತ್ತಾರೆ.

ವಿಜಯದಶಮಿಯ ಐದನೇ ದಿನಕ್ಕೆ ಬರೋ ಶೀಗಿ ಹುಣ್ಣಿಮೆ ಅಥವಾ ಕೋಜಗಿರಿ ಹುಣ್ಣಿಮೆಯಂದು ತುಳಜಾಪುರದಲ್ಲಿ ಅಭಿಷೇಕ ನಡೆಯುತ್ತದೆ. ತುಳಜಾಪುರಕ್ಕೆ ಪಾದಯಾತ್ರೆ ಮೂಲಕ ಹೋಗಿ ಅಭಿಷೇಕದಲ್ಲಿ ಪಾಲ್ಗೊಂಡ್ರೆ ತಾಯಿಯ ಕೃಪಾಕಟಾಕ್ಷ ಇರುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿ ಇದೆ.

ABOUT THE AUTHOR

...view details