ಕರ್ನಾಟಕ

karnataka

ETV Bharat / state

ಟೋಲ್ ಸಿಬ್ಬಂದಿ ಅನುಚಿತ ವರ್ತನೆ.. ಬಸವ ಸೈನ್ಯ ಕಾರ್ಯಕರ್ತರ ಪ್ರತಿಭಟನೆ - vijaypu news

ಜನರೊಂದಿಗೆ ಸರಿಯಾಗಿ ನಡೆದುಕೊಳ್ಳದ ಟೋಲ್ ಪ್ಲಾಜಾ‌ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ರಾಷ್ಟ್ರೀಯ ಬಸವ ಸೈನ್ಯದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು..

protest
ಬಸವ ಸೈನ್ಯ ಕಾರ್ಯಕರ್ತರ ಪ್ರತಿಭಟನೆ

By

Published : Jul 6, 2020, 6:18 PM IST

ವಿಜಯಪುರ :ಟೋಲ್ ಪ್ಲಾಜಾ ಸಿಬ್ಬಂದಿ ವಾಹನ ಸವಾರರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಬಸವ ಸೈನ್ಯದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಹೊರ ಹೊಲಯದಲ್ಲಿರುವ ಟೋಲ್ ಸಿಬ್ಬಂದಿ ವಾಹನ ಸವಾರರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಇತ್ತ ದೂರದ ಊರುಗಳಿಂದ ಬರುವ ಜನರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ‌. ಹಳ್ಳಿಗಳಿಂದ ಪ್ರತಿದಿನ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ ಮೂಲಕ ಗುಮ್ಮಟನಗರಿಯ ಎಪಿಎಂಸಿ ಮಾರುಕಟ್ಟೆಗೆ ಆಗಮಿಸುತ್ತಾರೆ. ರೈತರೊಂದಿಗೆ ಪ್ಲಾಜಾ ಸಿಬ್ಬಂದಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಬಸವ ಸೈನ್ಯದ ಕಾರ್ಯಕರ್ತರು ಆರೋಪಿಸಿದ್ರು.

ಬಸವ ಸೈನ್ಯ ಕಾರ್ಯಕರ್ತರ ಪ್ರತಿಭಟನೆ

ಜನರೊಂದಿಗೆ ಸರಿಯಾಗಿ ನಡೆದುಕೊಳ್ಳದ ಟೋಲ್ ಪ್ಲಾಜಾ‌ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ರಾಷ್ಟ್ರೀಯ ಬಸವ ಸೈನ್ಯದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details