ವಿಜಯಪುರ:ಮಹಾರಾಷ್ಟ್ರದ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಕಂಟಕವಾಗಿದ್ದಾರೆ. ಇವರನ್ನು ತವರಿಗೆ ಕರೆ ತರಲು ಮುಂಬೈ-ಗದಗ ರೈಲು ಸಂಚಾರ ಆರಂಭಿಸಿದೆ. ಆದರೆ, ವಿಜಯಪುರಕ್ಕೆ ಬಂದ ಮೇಲೆ ಕ್ವಾರಂಟೈನ್ ಕೇಂದ್ರಕ್ಕೆ ಹಾಕುತ್ತಾರೆ ಎನ್ನುವ ಭಯಕ್ಕೆ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಿಂದ ಅಕ್ರಮವಾಗಿ ವಿಜಯಪುರ ಜಿಲ್ಲೆಗೆ ವಲಸೆ ಕಾರ್ಮಿಕರು ಎಂಟ್ರಿ ಕೊಡುತ್ತಿದ್ದಾರೆ.
ವಲಸೆ ಕಾರ್ಮಿಕರು ಅಕ್ರಮವಾಗಿ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಪಾಸಿಟಿವ್ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದಾರೆ. ಇದು ಸಹಜವಾಗಿ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಅಕ್ರಮವಾಗಿ ಕರ್ನಾಟಕಕ್ಕೆ ಬರಲು ಬತ್ತಿದ ಭೀಮಾನದಿ ಆಶ್ರಯವಾಗಿದೆ. ಬತ್ತಿಹೋದ ಭೀಮಾ ನದಿಯನ್ನ ಅಡ್ಡಲಾಗಿ ದಾಟಿಕೊಂಡು ವಲಸಿಗರು ಬರುತ್ತಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿರುವ ವಿಜಯಪುರಕ್ಕೆ ಆತಂಕ ಹೆಚ್ಚಾಗಿದೆ.