ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮತ್ತೆ ತಲೆಯೆತ್ತಿದ ಅಕ್ರಮ ಮರಳು ದಂಧೆ - ವಿಜಯಪುರ

ಅಕ್ರಮ ಮರಳು ಮಾಫಿಯಾ ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮೋರಟಗಿ ಚೆಕ್ ಪೋಸ್ಟ್​​ಗೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಹಾಗೂ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijayapur
ವಿಜಯಪುರ

By

Published : May 27, 2021, 9:56 AM IST

ವಿಜಯಪುರ: ಕೊರೊನಾ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಮತ್ತೊಮ್ಮೆ ಮರಳು ಮಾಫಿಯಾ ತಲೆ ಎತ್ತಿದೆ. ಭೀಮಾ ನದಿ ವ್ಯಾಪ್ತಿಯ ದೇವಣಗಾಂವನಲ್ಲಿ 5 ಲಕ್ಷ ರೂ. ಮೌಲ್ಯದ ಮರಳು ಹಾಗೂ ಇಂಡಿ ತಾಲೂಕಿನ ನದಿ‌ ದಂಡೆಯ ಮೇಲೆ ಎರಡು ತಿಂಗಳ ಅವಧಿಯಲ್ಲಿ 8 ಪ್ರಕರಣ ದಾಖಲಿಸಿಕೊಂಡು 3,344 ಟನ್ ಅಕ್ರಮ ಮರಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಬೆಲೆ 17 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.‌

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಬಳಿಯ ಚಿಕ್ಕಗಲಗಲಿ ವ್ಯಾಪ್ತಿಯಲ್ಲಿ ಮೂರು ಲಾರಿ ವಶ ಪಡಿಸಿಕೊಂಡಿರುವ ಪೊಲೀಸರು ಹಾಗೂ ತಹಶೀಲ್ದಾರರ ತಂಡ ಒಟ್ಟು 5 ಬ್ರಾಸ್ (14 ಕ್ಯೂಬಿಕ್ ಮೀಟರ್)ನಷ್ಟು ಅಕ್ರಮ ಮರಳು ವಶಪಡಿಸಿಕೊಂಡಿದೆ. ಇದರ ಬೆಲೆ ಲಕ್ಷಾಂತರ ರೂ. ಮೌಲ್ಯ ಎಂದು ಅದಾಂಜಿಸಲಾಗಿದ್ದು, ಒಟ್ಟು 25 ಲಕ್ಷ ರೂ. ಮೌಲ್ಯದ ಅಕ್ರಮ ಮರಳನ್ನು ಜಿಲ್ಲೆಯ ನದಿ ದಂಡೆಯಿಂದ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮರಳು ದಂಧೆ: ಮೂರು ಲಾರಿ ವಶಪಡಿಸಿಕೊಂಡಿರುವ ಪೊಲೀಸರು

ಡಿಸಿ ಅನೀರಿಕ್ಷಿತ ಭೇಟಿ:

ಜಿಲ್ಲೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳು ಮಾಫಿಯಾ ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮೋರಟಗಿ ಚೆಕ್ ಪೋಸ್ಟ್​​ಗೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಹಾಗೂ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಚೆಕ್ ಪೋಸ್ಟ್​​ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಅಕ್ರಮವಾಗಿ ಮರಳು ತುಂಬಿದ ವಾಹನಗಳು ಚೆಕ್ ಪೋಸ್ಟ್ ಮೂಲಕ ದಾಟಿ ಹೋಗದಂತೆ ಕ್ರಮ ಕೈಗೊಳ್ಳಲು ಸೂಚಿ‌ಸಿದರು.

ಚೆಕ್ ಪೋಸ್ಟ್​​​ನಲ್ಲಿನ ಸಿಸಿಟಿವಿ ದೃಶ್ಯಾವಳಿ ವೀಕ್ಷಣೆ

ಬಗಲೂರ ಗ್ರಾಮದ ಮೂಲಕ ಘತ್ತರಗಿ ಸೇತುವೆಯನ್ನು ವೀಕ್ಷಣೆ ಮಾಡಿದ ಅವರು, ಬಳಿಕ ದೇವಣಗಾಂವ ಗ್ರಾಮದ ಚೆಕ್ ಪೋಸ್ಟ್​​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೇವಣಗಾಂವ ಗ್ರಾಮದ ಭೀಮಾ ನದಿ ದಂಡೆಯಲ್ಲಿ ಈಗಾಗಲೇ ವಶಪಡಿಸಿಕೊಂಡ ಅಕ್ರಮ ಮರಳನ್ನು ವೀಕ್ಷಿಸಿದರು. ಯಾವುದೇ ಕಾರಣಕ್ಕೂ ಅಕ್ರಮ ಮರಳುಗಾರಿಕೆ ನಡೆಯದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಥಳದಲ್ಲಿ ತಹಶೀಲ್ದಾರ್ ಸಂಜೀವ ಕುಮಾರ್ ದಾಸರ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಚಿದಂಬರ, ಸಿಂದಗಿ ಪಿಎಸ್​​ಐ ಸಂಗಮೇಶ ಹೊಸಮನಿ ಹಾಗೂ ಆಲಮೇಲ ಪಿಎಸ್​​ಐ ಸುರೇಶ್ ಗಡ್ಡಿ ಉಪಸ್ಥಿತರಿದ್ದರು.

ABOUT THE AUTHOR

...view details