ಕರ್ನಾಟಕ

karnataka

ETV Bharat / state

ಭೀಮಾ ತೀರದ ರಕ್ತಸಿಕ್ತ ಕುಟುಂಬದ ಮೇಲೆ ಕೋಕಾ ಕಾಯ್ದೆ

ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹುತೇಕ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು, ಇನ್ನು ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್​ ತಿಳಿಸಿದ್ದಾರೆ.

ಐಜಿಪಿ ರಾಘವೇಂದ್ರ ಸುಹಾಸ
IGP Raghavendra Suhasha

By

Published : Mar 16, 2021, 1:07 PM IST

ವಿಜಯಪುರ:ಭೀಮಾ ತೀರದ ಎರಡು ಕುಟುಂಬಗಳ ರಕ್ತಸಿಕ್ತ ಇತಿಹಾಸ ಕೊನೆಗಾಣಿಸಲು ಎರಡು ಕುಟುಂಬದ ಅಪರಾಧಿಕ ಹಿನ್ನೆಲೆ ಹೊಂದಿರುವ ಕುಟುಂಬದ ಮೇಲೆ ಕೋಕಾ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಹೇಳಿದರು.

ವಿಜಯಪುರ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹುತೇಕ ಪ್ರಕರಣದ ಆರೋಪಿಗಳು ಜೈಲು ಪಾಲಾಗಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು.

ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ

ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಶೂಟೌಟ್ ಪ್ರಕರಣದ ಕಿಂಗ್​​​ಫಿನ್​ ಮಲ್ಲಿಕಾರ್ಜುನ ಚಡಚಣ ಹಾಗೂ ಅವರ ಕುಟುಂಬ ಪ್ರಕರಣ ನಂತರ ತಲೆಮರೆಸಿಕೊಂಡಿದ್ದಾರೆ. ಅವರ ಹುಡುಕಾಟಕ್ಕೆ ಈಗಾಗಲೇ ಹಲವು ತಂಡಗಳು ಮುಂಬೈ ಸೇರಿದಂತೆ ವಿವಿಧೆಡೆ ತಂಡ ತೆರಳಿ ಹುಡುಕಾಟ ನಡೆಸುತ್ತಿದೆ ಎಂದರು.

ಸದ್ಯ ಭೀಮಾತೀರದ ರಕ್ತಸಿಕ್ತ ಇತಿಹಾಸಕ್ಕೆ ಇತಿಶ್ರೀ ಹಾಡಲು ಎರಡು ಕುಟುಂಬದವರ ಅಪರಾಧಿ ಹಿನ್ನೆಲೆ ಹೊಂದಿರುವವರ ಮೇಲೆ ಕೋಕಾ ಕಾಯ್ದೆ ಜಾರಿಗೊಳಿಸುವ ಚಿಂತನೆ ನಡೆಸಲಾಗುತ್ತಿದೆ ಎಂದರು. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ 50 ಅಪರಾಧಿಗಳ ಮೇಲೆ ಗುಂಡಾ ಕಾಯ್ದೆ ಜಾರಿ ಮಾಡಲಾಗಿದೆ. ಹಲವರನ್ನು ಗಡಿಪಾರು ಮಾಡಲಾಗಿದೆ. ಎರಡು ಜಿಲ್ಲೆಯಲ್ಲಿ ಅಪರಾಧಿಗಳು ಬಾಲ ಬಿಚ್ಚದಂತೆ ಎಸ್ಪಿಗಳು ಅವರ ಮೇಲೆ ನಿಯಂತ್ರಣದಲ್ಲಿಟ್ಟಿದ್ದಾರೆ. ಗ್ಯಾಂಗ್ ವಾರ್ ಸೇರಿದಂತೆ ಅಪರಾಧಿಕ ಹಿನ್ನೆಲೆ ಹೊಂದಿರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದರು.

ABOUT THE AUTHOR

...view details