ವಿಜಯಪುರ:ಜಿಲ್ಲೆಯಲ್ಲಿ ಬೆಳೆದಿರುವ ಅಲ್ಪ-ಸ್ವಲ್ಪ ಬೆಳೆಗಳ ರಕ್ಷಣೆಗೆ, ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕೆಂದು ಕೋರಿ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸುವ ಸಲುವಾಗಿ ಸಿಎಂ ಜೊತೆ ಚರ್ಚಿಸುವೆ: ರಮೇಶ ಜಿಗಜಿಣಗಿ
ವಿಜಯಪುರ ಜಿಲ್ಲೆಯಲ್ಲಿ ಬೆಳೆದಿರುವ ಅಲ್ಪ-ಸ್ವಲ್ಪ ಬೆಳೆಗಳ ರಕ್ಷಣೆಗೆ, ಕೃಷ್ಣಾನದಿಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕೆಂದು ಕೋರಿ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತೆ ಎಂಬ ನಂಬಿಕೆ ನನಗಿಲ್ಲ. 12 ವರ್ಷದಲ್ಲಿ 8 ಬಾರಿ ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ಈ ಬಾರಿ ಕೂಡಾ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಜಿಲ್ಲೆಯಲ್ಲಿ ಹಲವೆಡೆ ಕೆನಾಲ್ಗಳಿವೆ. ಅವುಗಳಿಗೆ ಆಲಮಟ್ಟಿ ಕಾಲುವೆ ಮೂಲಕ ನೀರು ಬಿಡಬೇಕು ಎಂದರು.
ರೈತರ ಬೆಳೆಗಳಿಗೆ ನೀರು ಬಿಡುವುದರ ಜೊತೆಗೆ ಕೆರೆ-ಕಟ್ಟೆ, ಹಳ್ಳಗಳಿಗೆ ನೀರು ತುಂಬಬೇಕು. ಈ ಕುರಿತು ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಸದ್ಯದ ಸಮಸ್ಯೆ ವಿವರಿಸುತ್ತೇನೆ ಎಂದರು.