ವಿಜಯಪುರ :ನನ್ನ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂಬ ಕಾರಣ ನೀಡಿ ಕೇಂದ್ರ ನಾಯಕರು ನನಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಹೊರತು, ನನ್ನ ಕೈಗೆ ಯಾವುದೇ ನೋಟಿಸ್ ಸಿಕ್ಕಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ನೋಟಿಸ್ ಜಾರಿಯಾಗಿದೆ ಎಂದು ಮಾಧ್ಯಮದವರು ದಿನಬೆಳಗಾದರೆ ಹೇಳುತ್ತಿದ್ದಾರೆ. ಹಾಗಿದ್ದರೆ ನೀವೇ ಅದರ ಪ್ರತಿ ಕೊಡಿ ಎಂದು ಮರು ಪ್ರಶ್ನಿಸಿದ ಅವರು, ನೋಟಿಸ್ ನೀಡಿದರೆ ತಕ್ಷಣ ಉತ್ತರ ನೀಡಲು ನಾನು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಕೇಂದ್ರ ನಾಯಕರ ವಿರುದ್ಧವೂ ಚಾಟಿ ಬೀಸಿದರು.
ಮತ್ತೆ ಭದ್ರತೆ :ಮುಖ್ಯಮಂತ್ರಿ ವಿರುದ್ಧ ಪದೇಪದೆ ಹೇಳಿಕೆ ನೀಡುತ್ತಿದ್ದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ್ದ ಭದ್ರತೆ ವಾಪಸ್ ತೆಗೆದುಕೊಂಡ ಬೆನ್ನಲ್ಲೇ, ಈಗ ಪೊಲೀಸ್ ಭದ್ರತೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯತ್ನಾಳ್, ಸರ್ಕಾರ ಹಿಂಪಡೆದಿರಬಹುದು.