ವಿಜಯಪುರ: ರಾಜ್ಯದಲ್ಲಿರುವ ಜಲ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನಾ ಕಾರ್ಯ ಚುರುಕುಗೊಂಡ ಹಿನ್ನೆಲೆ ದಿಢೀರಾಗಿ ಉಷ್ಣ ವಿದ್ಯುತ್ ಬೇಡಿಕೆ ಇಳಿಕೆಯಾಗಿದೆ.
ಉಷ್ಣ ವಿದ್ಯುತ್ ಉತ್ಪಾದನೆಯನ್ನು ಬದಿಗೊತ್ತುತ್ತಿರುವ ಜಲ ವಿದ್ಯುತ್ ಸ್ಥಾವರಗಳು..
ಉಷ್ಣ ವಿದ್ಯುತ್ ಬೇಡಿಕೆ ಕಡಿಮೆಯಾದ ಹಿನ್ನೆಲೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕೂಡಗಿಯ ಎನ್ಟಿಪಿಸಿಯ ಮೂರರಲ್ಲಿ ಒಂದು ಘಟಕ ಮಾತ್ರ ಕಾರ್ಯ ಆರಂಭಿಸಿದೆ. ಬೇಡಿಕೆ ಬಂದರೆ ಘಟಕಗಳನ್ನು ಪ್ರಾರಂಭಿಸಿ ಅವಶ್ಯಕ ವಿದ್ಯುತ್ ಉತ್ಪಾದಿಸಲಾಗುವುದು ಎಂದು ಎನ್ಟಿಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉಷ್ಣ ವಿದ್ಯುತ್ ಬೇಡಿಕೆ ಕಡಿಮೆಯಾದ ಹಿನ್ನೆಲೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕೂಡಗಿಯ ಎನ್ಟಿಪಿಸಿಯ ಮೂರರಲ್ಲಿ ಒಂದು ಘಟಕ ಮಾತ್ರ ಕಾರ್ಯ ಆರಂಭಿಸಿದೆ.ಎನ್ಟಿಪಿಸಿ ಮೂರು ಘಟಕಗಳು ಒಟ್ಟು 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 465 ಮೆಗಾವ್ಯಾಟ್ ವಿದ್ಯುತ್ ಮಾತ್ರ ಬೇಡಿಕೆ ಇರುವ ಹಿನ್ನೆಲೆ ಒಂದು ಘಟಕ ಮಾತ್ರ ಕಾರ್ಯ ಆರಂಭಿಸಿದೆ. ಸದ್ಯ 1ನೇ ಘಟಕ ಸ್ಥಗಿತಗೊಳಿಸಿ, ಮೂರನೇ ಘಟಕದಿಂದ ಮಾತ್ರ ವಿದ್ಯುತ್ ಉತ್ಪಾದನಾ ಕಾರ್ಯ ಮಾಡಲಾಗುತ್ತಿದೆ. ಇನ್ನು, ಎನ್ಟಿಪಿಸಿ ಅಧಿಕಾರಿಗಳು ಎರಡನೇ ಘಟಕದ ವಾರ್ಷಿಕ ತಾಂತ್ರಿಕ ನಿರ್ವಹಣೆ ಕೈಗೊಂಡಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ 2ನೇ ಘಟಕದ ನಿರ್ವಹಣೆ ಕಾರ್ಯ ಕೂಡ ಮುಕ್ತಾಯವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಟಿಪಿಸಿ ಅಧಿಕಾರಿಗಳು, ಬೇಡಿಕೆ ಬಂದರೆ ಘಟಕಗಳನ್ನು ಪ್ರಾರಂಭಿಸಿ ಅವಶ್ಯಕ ವಿದ್ಯುತ್ ಉತ್ಪಾದಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.