ಕರ್ನಾಟಕ

karnataka

ETV Bharat / state

ಮಕ್ಕಳ ನೋಡಲು ಬಿಡದ ಕೋಪ; ಪತ್ನಿ ಕೊಲೆಗೈದು ಶವ ಹೂತಿಟ್ಟ ಪತಿ - ಮಹಿಳೆ ಕೊಲೆ

ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಕೋಪಗೊಂಡ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಬಳಿಕ ಶವವನ್ನು ಗ್ರಾಮದ ಹೊರವಲಯದಲ್ಲಿ ಹೂತಿಟ್ಟಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

husband-kills-wife-for-silly-reason-at-vijayapura
ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಾಳೆಂದು ಪತಿಯಿಂದಲೇ ಪತ್ನಿಯ ಹತ್ಯೆ

By

Published : Aug 29, 2021, 11:52 AM IST

ವಿಜಯಪುರ: ಪತಿಯಿಂದ ದೂರಾಗಿ ಬೇರೆಡೆ ನೆಲೆಸಿದ್ದ ಪತ್ನಿಯನ್ನು ಕೊಲೆ ಮಾಡಿರುವ ಗಂಡ ಮೃತದೇಹವನ್ನು ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಕೊಲ್ಹಾರ ತಡಲಗಿ ಗ್ರಾಮದಲ್ಲಿ ಕೊಲೆಯಾದ ಮಹಿಳೆಯನ್ನು 36 ವರ್ಷದ ದಾಕ್ಷಾಯಣಿ ಎಂದು ಗುರುತಿಸಲಾಗಿದೆ.

ತನ್ನಿಂದ ಮಕ್ಕಳನ್ನು ದೂರ ಮಾಡಿದ್ದಾಳೆ ಎಂದು ಕೋಪಗೊಂಡ ಪತಿ ರಾಚಯ್ಯ ಬನ್ನಿಗೋಳಮಠ ಕೃತ್ಯ ಎಸಗಿದ್ದಾನೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಈ ಕುಟುಂಬ ಜೀವನ ಸಾಗಿಸುತ್ತಿತ್ತು. ಆದರೆ ಮನೆಯಲ್ಲಿ ನಿತ್ಯ ಪತಿ-ಪತ್ನಿ ಜಗಳ ನಡೆಯುತ್ತಿದ್ದು, ದಾಕ್ಷಾಯಣಿ ಮಕ್ಕಳ ಜತೆ ಬೇರೆಯಾಗಿ ವಾಸವಿದ್ದರು. ಮಕ್ಕಳನ್ನು ಪತಿಗೆ ತೋರಿಸುತ್ತಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರಾಚಯ್ಯ ಪತ್ನಿಯನ್ನು ಕೊಲೆ ಮಾಡಿ ಶವವನ್ನು ಗ್ರಾಮದ ಹೊರವಲಯದಲ್ಲಿ ಹೂತಿಟ್ಟಿದ್ದಾನೆ.

ಈ ವಿಷಯವನ್ನು ಗ್ರಾಮಸ್ಥರು ಪೊಲೀಸರಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕೊಲ್ಹಾರ ಪೊಲೀಸರು, ಶವವನ್ನು ಹೊರತೆಗೆದು ಶವ ಪರೀಕ್ಷೆಗೆ ಕಳುಹಿಸಿದ್ದಾರೆ. ರಾಚಯ್ಯನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪ್ರಾಪ್ತೆಗೆ ಕಿರುಕುಳ ಆರೋಪ: ಮಾಹಿತಿ ಕಲೆಹಾಕಿದ ಬೆಂಗಳೂರು ಪೊಲೀಸರು

ABOUT THE AUTHOR

...view details