ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣೆ ಅಖಾಡ ರಂಗೇರತೊಡಗಿದ್ದು, ನಾಳೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಈ ನಡುವೆ ಚುನಾವಣೆ ಅಖಾಡ ಹಲವು ಸ್ವಾರಸ್ಯಕರ ಘಟನೆಗಳಿಗೂ ಕಾರಣವಾಗುತ್ತಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದ ಟೈಲರ್ ವೃತ್ತಿಯಲ್ಲಿರುವ ಹುಸೇನಸಾಬ್ ಮುಲ್ಲಾ ಹಾಗೂ ಅವರ ಪತ್ನಿ ಮಾಲನಬಿ ಹುಸೇನಸಾಬ್ ಮುಲ್ಲಾ ಇಬ್ಬರೂ ಹುಣಶ್ಯಾಳ ಪಿ.ಬಿ. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಹುಣಶ್ಯಾಳ ಪಿ.ಬಿ. ಗ್ರಾಮ ಪಂಚಾಯಿತಿಗೆ ಎರಡು ಸ್ಥಾನಗಳಿವೆ. ಇವುಗಳಲ್ಲಿ ಒಂದು ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಿದ್ದು, ಇನ್ನೊಂದು ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪತಿ ಹುಸೇನಸಾಬ್ ಮುಲ್ಲಾ ಸಾಮಾನ್ಯ ವರ್ಗದಿಂದ ಹಾಗೂ ಪತ್ನಿ ಮಾಲನಬಿ ಮುಲ್ಲಾ ಹಿಂದುಳಿದ ವರ್ಗದ ಮಹಿಳೆ ಮೀಸಲು ಕೋಟಾದಡಿ ನಾಮಪತ್ರ ಸಲ್ಲಿಸಿದ್ದಾರೆ.