ವಿಜಯಪುರ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಗಸ್ತು ತಿರುಗಲು ಬಂದಾಗ ಶಾಲಾ ಬಸ್ ಕೆಟ್ಟು ನಿಂತ ಹಿನ್ನೆಲೆ ಮಕ್ಕಳು ರಸ್ತೆ ಮೇಲೆ ಕುಳಿತಿದ್ದನ್ನು ನೋಡಿ ಮೆಕ್ಯಾನಿಕ್ನನ್ನು ಕರೆಯಿಸಿ ರಿಪೇರಿ ಮಾಡಿಸಿ ಎಲ್ಲರನ್ನೂ ಅದೇ ಬಸ್ನಲ್ಲಿ ತವರೂರಿಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಡು ರಾತ್ರಿ ಕೆಟ್ಟು ನಿಂತ ಶಾಲಾ ಮಕ್ಕಳ ಬಸ್ : ರಿಪೇರಿ ಮಾಡಿಸಿ ಮಾನವೀಯತೆ ಮೆರೆದ ಪಿಎಸ್ಐ - ಈಟಿವಿ ಭಾರತ ಕನ್ನಡ
ಶಾಲಾ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳ ಬಸ್, ರಾತ್ರಿ ಸಮಯ ಕೆಟ್ಟು ನಡು ರಸ್ತೆಯಲ್ಲೇ ನಿಂತಿರುವುದನ್ನು ಕಂಡ ಪಿಎಸ್ಐ ಅವರು ಕೂಡಲೇ ಮೆಕ್ಯಾನಿಕ್ ಅವರನ್ನು ಕರೆಯಿಸಿ ಬಸ್ ರಿಪೇರಿ ಮಾಡಿಸಿದ್ದಾರೆ.
ನಡು ರಾತ್ರಿ ಕೆಟ್ಟು ನಿಂತ ಶಾಲಾ ಮಕ್ಕಳ ಬಸ್
ಗೋಕಾಕ್ ತಾಲೂಕಿನ ಕೊಣ್ಣೂರಿನ ಶಾಂತಿಸಾಗರ ಶಾಲೆಯ ವಿದ್ಯಾರ್ಥಿಗಳು ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಎಂದು ಗೋಕಾಕ್ ಡಿಪೋದ ಬಸ್ನಲ್ಲಿ ವಿಜಯಪುಯರಕ್ಕೆ ಬಂದಿದ್ದರು. ಆಲಮಟ್ಟಿ ಡ್ಯಾಂ ಬಳಿ ಬಸ್ ಕೆಟ್ಟು ರಸ್ತೆ ಪಕ್ಕದಲ್ಲಿ ನಿಂತಿತ್ತು. ಇದನ್ನು ಕಂಡ ಪಿಎಸ್ಐ ಖಾಜು ವಾಲಿಕಾರ ಬಸ್ ರಿಪೇರಿ ಮಾಡಿಸಿದ್ದಾರೆ. ಕರ್ತವ್ಯದ ಮಧ್ಯೆಯೂ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಶಾಲಾ ಮಕ್ಕಳ ಪ್ರವಾಸದ ಬಸ್ ಅಪಘಾತ: ಎಕ್ಸಲ್ ಕಟ್ ಆಗಿ ಹೊರಬಂದ ಚಕ್ರಗಳು
Last Updated : Dec 17, 2022, 6:18 PM IST