ಮುದ್ದೇಬಿಹಾಳ(ವಿಜಯಪುರ): ಮಳೆಯಿಂದ ಪೂರ್ಣ ಹಸಿಯಾಗಿದ್ದ ಹಳೆಯ ಕಾಲದ ಮನೆಯೊಂದರ ಛಾವಣಿ ಕುಸಿದು ವೃದ್ಧೆಯೊಬ್ಬಳು ಸಿಲುಕಿಕೊಂಡ ಘಟನೆ ತಾಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮನೆಯ ಮೇಲ್ಚಾವಣಿ ಕುಸಿತ: ಮಣ್ಣಿನಡಿ ಸಿಲುಕಿದ್ದ ವೃದ್ಧೆಯ ರಕ್ಷಣೆ - ಮುದ್ದೇಬಿಹಾಳ ಲೇಟೆಸ್ಟ್ ಅಪ್ಡೇಟ್ ನ್ಯೂಸ್
ಮನೆಯ ಮೇಲ್ಛಾವಣಿ ಕುಸಿದು, ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಮಹಾಂತಮ್ಮ ರಾಮಲಿಂಗಪ್ಪ ಹೂಗಾರ ಎಂಬ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ.
ಮನೆ ಮೇಲ್ಚಾವಣಿ ಕುಸಿದು ಮಣ್ಣಿನಡಿ ಸಿಲುಕಿದ್ದ ವೃದ್ಧೆ ರಕ್ಷಣೆ
ದೇವರ ಹುಲಗಬಾಳ ಗ್ರಾಮದ ದುರ್ಗಾದೇವಿ ದೇವಸ್ಥಾನ ಸಮೀಪದಲ್ಲಿರುವ ಮಹಾಂತಮ್ಮ ರಾಮಲಿಂಗಪ್ಪ ಹೂಗಾರ ಎಂಬ ವೃದ್ಧೆಯ ಮನೆ ಕುಸಿದಿದ್ದರಿಂದ ಅವರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ತಕ್ಷಣ ಗ್ರಾಮದ ಸುತ್ತಮುತ್ತಲಿನ ಜನ ವೃದ್ಧೆಯನ್ನು ರಕ್ಷಿಸಿ ಗ್ರಾಮದ ವೀರೇಶ ಹಳ್ಳಿ ಎಂಬುವರು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಡು ಬಡವಳಾಗಿರುವ ಮಹಾಂತಮ್ಮಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಸಮಾಜ ಸೇವಕಿ ನೀಲಮ್ಮ ಚಲವಾದಿ ಒತ್ತಾಯಿಸಿದ್ದಾರೆ.