ವಿಜಯಪುರ: ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಿದ್ದು ಹೋಟೆಲ್ ಉದ್ಯಮ ನೆಲಕಚ್ಚಿದೆ. ಕೆಲಸಗಾರರಿಗೆ ಸಂಬಳ ಕೊಡಲು ಮಾಲೀಕರು ಪರದಾಡುತ್ತಿದ್ದಾರೆ. ಇದರ ನಡುವೆಯೇ ಬಡವರ ಸಹಾಯಕ್ಕೆ ಗುಮ್ಮಟನಗರಿಯ ಕೆಲ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಕೊರೊನಾ ಸಂಕಷ್ಟ: ಫುಡ್ ಪ್ಯಾಕೆಟ್ ನೀಡಿ ಮಾನವೀಯತೆ ಮೆರೆಯುತ್ತಿರುವ ಹೋಟೆಲ್ ಮಾಲೀಕರು - hotel business loss news
ಕೊರೊನಾ ವೈರಸ್ ಸಂಕಷ್ಟದಿಂದ ಬೀದಿಪಾಲಾಗಿರುವ ಜನರ ನೆರವಿಗೆ ಕೆಲ ಹೋಟೆಲ್ ಮಾಲೀಕರು ಧಾವಿಸಿದ್ದಾರೆ. ಬಡವರಿಗೆ ಅಗತ್ಯ ವಸ್ತುಗಳು,ಫುಡ್ ಪ್ಯಾಕೆಟ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಹೋಟೆಲ್ ಮಾಲೀಕರು
ವಿಜಯಪುರ ಜಿಲ್ಲೆಯಲ್ಲಿ 150 ಕ್ಕೂ ಹೋಟೆಲ್ ನೋಂದಣಿ ಮಾಡಲಾಗಿದೆ. ಕೊರೊನಾ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಇಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಾಗಾಗಿ ಇವರ ಸಹಾಯಕ್ಕೆ ಕೆಲ ಶ್ರೀಮಂತ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಕೊರೊನಾ ವೈರಸ್ ಸಂಕಷ್ಟದಿಂದ ಬೀದಿಪಾಲಾಗಿರುವ ಜನರ ನೆರವಿಗೆ ಕೆಲ ಹೋಟೆಲ್ ಮಾಲೀಕರು ಧಾವಿಸಿದ್ದಾರೆ. ಬಡವರಿಗೆ ಅಗತ್ಯ ವಸ್ತುಗಳು, ಫುಡ್ ಪ್ಯಾಕೇಟ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
Last Updated : Apr 21, 2020, 11:05 AM IST