ವಿಜಯಪುರ: ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿ ರಕ್ತದ ಮಾದರಿಯನ್ನು ಎರಡು ಬಾರಿ ಪರೀಕ್ಷೆ ನಡೆಸಿ, ಬೇರೆ - ಬೇರೆ ವರದಿ ಬಂದ ಕಾರಣ ಸಂಬಂಧಿಕರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಕ್ತ ಪರೀಕ್ಷೆ, ಬೇರೆ-ಬೇರೆ ವರದಿ ನೀಡಿ ಎಡವಟ್ಟು ಓದಿ: ಸಿಡಿ ಪ್ರಕರಣ: ಸದಾಶಿವ ನಗರ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ಪರ ಆಪ್ತನಿಂದ ದೂರು!?
ಒಂದೇ ಮಹಿಳೆಯ ಬ್ಲಡ್ ಟೆಸ್ಟ್ ಎರಡು ಬಾರಿ ಮಾಡಿಸಿದಾಗ, ಎರಡು ಬಾರಿ ಬೇರೆ ಬೇರೆ ರಿಪೊರ್ಟ್ ಅನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ನೀಡಿದ್ದು, ಗರ್ಭಿಣಿ ಸಂಬಂಧಿಕರ ಅಸಮಾಧಾನಕ್ಕೆ ಕಾರಣವಾಯಿತು.
ವಿಜಯಲಕ್ಷ್ಮೀ ಶ್ರೀಶೈಲ್ ಬಂಡರಕೋಟಿ ಎಂಬ ಗರ್ಭಿಣಿ ಹೆರಿಗೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆ ದಾಖಲಾಗಿದ್ದರು. ಈ ವೇಳೆ, ಗರ್ಭಿಣಿಯ ಬ್ಲಡ್ ಗ್ರೂಪ್ ಆಗಿದ್ದ ಬಿ+ ಹೆಚ್ಚುವರಿ ರಕ್ತ ತೆಗೆದುಕೊಂಡು ಬರುವಂತೆ ಹೇಳಿದ್ದರು. ಆದರೆ, ಗರ್ಭಿಣಿ ಪತಿಗೆ ಅಲ್ಲಿ ಅಚ್ಚರಿ ಕಾದಿತ್ತು.
ಕಳೆದ ಫೆ. 23 ರಂದು ಇದೇ ಆಸ್ಪತ್ರೆಯಲ್ಲಿ ರಕ್ತದ ಮಾದರಿ ಪರೀಕ್ಷೆ ನಡೆಸಿದ್ದ ವೇಳೆ ಎ + ಎಂದು ವರದಿ ನೀಡಿದ್ದರು. ಆದರೆ, ನಿನ್ನೆ ರಕ್ತದ ಮಾದರಿ ಪರೀಕ್ಷೆ ನಡೆಸಿದಾಗ ಬಿ + ಅಂತ ವರದಿ ನೀಡಿದ್ದು, ಇದರಿಂದ ಗೊಂದಲಕ್ಕೆ ಒಳಗಾದ ಗರ್ಭಿಣಿ ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಆಗ ಮತ್ತೊಮ್ಮೆ ರಕ್ತದ ಮಾದರಿ ಪರೀಕ್ಷೆ ನಡೆಸಿದಾಗ ಬಿ+ ಎಂದು ವರದಿ ಬಂದ ಮೇಲೆ ರಕ್ತ ಪರೀಕ್ಷೆ ನಡೆಸುವ ವೈದ್ಯರ ಎಡವಟ್ಟು ಬಯಲಿಗೆ ಬಂದಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಮನಿ ಭೇಟಿ ನೀಡಿ ಗರ್ಭಿಣಿ ವಿಜಯಲಕ್ಷ್ಮಿ ಪತಿ ಹಾಗೂ ಸಂಬಂಧಿಕ ಜೊತೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸರ್ಜನ್ ಶರಣಪ್ಪ ಕಟ್ಟಿ ಸಹ ಸ್ಥಳಕ್ಕೆ ಆಗಮಿಸಿ ಆಸ್ಪತ್ರೆಯ ಸಿಬ್ಬಂದಿಯ ತಪ್ಪು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.