ಕರ್ನಾಟಕ

karnataka

ETV Bharat / state

ಹೊಸಪೇಟೆ: ಅಪರೂಪದ ‘ಯುರೇಶಿಯನ್ ಗ್ರಿಫನ್ ವಲ್ಚರ್’ ಪತ್ತೆ - ETv Bharat Kannada news

ರಣಹದ್ದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಕಳುಹಿಸಲಾಗಿದೆ.

Rare Eurasian Griffon Vulture
ಅಪರೂಪದ ಯುರೇಶಿಯನ್ ಗ್ರಿಫನ್ ವಲ್ಚರ್ ರಣಹದ್ದು

By

Published : Dec 15, 2022, 10:29 PM IST

ಹೊಸಪೇಟೆ(ವಿಜಯನಗರ):ಅಪರೂಪದ ‘ಯುರೇಶಿಯನ್ ಗ್ರಿಫನ್ ವಲ್ಚರ್’ ಹೊಸಪೇಟೆ ನಗರದಲ್ಲಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡು ನೆಲಕ್ಕೆ ಬಿದ್ದ ಪಕ್ಷಿ ರಾಣಿಪೇಟೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕೈಗೆ ಸಿಕ್ಕಿದೆ. ಈ ಬಗ್ಗೆ ವಿಚಾರಿಸಿದಾಗ, ಆಕಾಶದಿಂದ ಬಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ವಿನಯ್ ರಣಹದ್ದಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಕಳುಹಿಸಿದರು. ಭಾರತದ ಉತ್ತರ ಭಾಗ ಹಾಗೂ ವಾಯವ್ಯ ಭಾರತದಲ್ಲಿ ಕಂಡುಬರುವ ಈ ರಣಹದ್ದುಗಳು ರಾಮನಗರ ಸುತ್ತಮುತ್ತಲ ಪ್ರದೇಶದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಚಳಿಗಾಲ ಇರುವುದರಿಂದ ವಲಸೆ ಬಂದಿರುವ ಸಾಧ್ಯತೆ ಇದೆ ಎಂದು ಪಕ್ಷಿ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ:ಅಪರೂಪದ ರಣಹದ್ದು ಪತ್ತೆ: ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ

ABOUT THE AUTHOR

...view details